ಈಗ ದೇಶದ ಚಾಂಪಿಯನ್ ಸೈನಾಳೇ ದೇಶದ್ರೋಹಿಯಾಗಿಬಿಟ್ಟರು !

Update: 2016-12-13 17:03 GMT

ಚೆನ್ನೈ, ಡಿ.12: ಪದ್ಮ ಭೂಷಣ ಪುರಸ್ಕೃತೆ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ದೇಶದ ಪರ ವಿವಿಧ ಟೂರ್ನಮೆಂಟ್‌ಗಳಲ್ಲಿ ಸ್ಪರ್ಧಿಸಿ ಹಲವು ಪದಕ, ಟ್ರೋಫಿಗಳನ್ನು ಬಾಚಿಕೊಂಡ ದೇಶದ ಹೆಮ್ಮೆಯ ಕ್ರೀಡಾತಾರೆ . ಆದರೆ ಅವರು ಚೀನಾ ಮೊಬೈಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕಾರಣಕ್ಕಾಗಿ ಹಲವು ಮಂದಿಗೆ ದೇಶದ್ರೋಹಿಯಾಗಿ ಬಿಟ್ಟಿದ್ದಾರೆ !

ಇತ್ತೀಚೆಗೆ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಚೀನಾದ ಫೋನ್‌ನೊಂದಿಗೆ ‘‘8 ಫೋನ್ ನನಗೆ ದೊರೆತ ಗೌರವವಾಗಿದೆ. ಪೋನ್ ಮತ್ತು ಅದರ ಬಣ್ಣವನ್ನು ಪ್ರೀತಿಸಿ’’ ಎಂಬ ಸ್ಲೋಗನ್ ಇರುವ ಚಿತ್ರವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದರು.

ಸೈನಾ ನೆಹ್ವಾಲ್ ಚೀನಾದ ಫೋನ್ ಜೊತೆ ಕಾಣಿಸಿಕೊಂಡಿರುವ ಕಾರಣಕ್ಕಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಚೀನಾ ಫೋನ್‌ನ್ನು ಕೊಂಡುಕೊಳ್ಳಲು ಉತ್ತೇಜನ ನೀಡಿದ್ದಾರೆಂಬ ಆರೋಪದಲ್ಲಿ ಅವರು ಹಲವರ ಕಣ್ಣಿಗೆ ಗುರಿಯಾಗಿದ್ಧಾರೆ.

   ‘‘ಸೈನಾ ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ. ಚೀನಾದ ಉತ್ಪನ್ನಗಳನ್ನು ಕೊಂಡುಕೊಳ್ಳಲು ಉತ್ತೇಜನ ನೀಡಬೇಡಿ. ಇಂತಹ ಉತ್ಪನ್ನಗಳನ್ನು ತಿರಸ್ಕರಿಸಿ ’’ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘‘ ನಾನೊಬ್ಬ ನಿಮ್ಮ ಅಭಿಮಾನಿ. ನೀವು ಚೀನಾದ ಉತ್ಪನ್ನವನ್ನು ಕೊಂಡುಕೊಳ್ಳಲು ಹೇಳಿದರೆ ನಾನು ಕೊಂಡುಕೊಳ್ಳುವುದಿಲ್ಲ. ಇಂತಹ ವ್ಯವಹಾರವನ್ನು ನಿಲ್ಲಿಸಿ’’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

 ಚೀನಾದ ಬಹುರಾಷ್ಟ್ರೀಯ ಕಂಪೆನಿಯೊಂದು ಭಾರತದಲ್ಲಿ ತನ್ನ ಮಾರುಕಟ್ಟೆ ಜಾಲವನ್ನು ವಿಸ್ತರಿಸುವುದಕ್ಕಾಗಿ ಫ್ಲೆಕ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News