ಭಾರತ ತಂಡಕ್ಕೆ ಉದಿತಾ ನಾಯಕಿ, ಸಲಿಮಾ ಉಪ ನಾಯಕಿ
ಹೊಸದಿಲ್ಲಿ, ಡಿ.13: ಥಾಯ್ಲೆಂಡ್‌ನಲ್ಲಿ ನಡೆಯಲಿರುವ ನಾಲ್ಕನೆ ಆವೃತ್ತಿಯ ಮಹಿಳೆಯರ ಅಂಡರ್-18 ಏಷ್ಯಾಕಪ್‌ನಲ್ಲಿ 18 ಸದಸ್ಯೆಯರನ್ನು ಒಳಗೊಂಡ ಭಾರತದ ತಂಡವನ್ನು ಮಿಡ್ ಫೀಲ್ಡರ್ ಉದಿತಾ ನಾಯಕಿಯಾಗಿ ಮುನ್ನಡೆಸಲಿದ್ದಾರೆ.
ಏಷ್ಯಾಕಪ್ ಥಾಯ್ಲೆಂಡ್‌ನ ಬ್ಯಾಂಕಾಂಗ್‌ನಲ್ಲಿ ಡಿ.16 ರಿಂದ 22ರ ತನಕ ನಡೆಯಲಿದೆ. ಮುಂಬರುವ ಟೂರ್ನಿಗೆ ತಂಡವನ್ನು ಮಂಗಳವಾರ ಪ್ರಕಟಿಸಿರುವ ಹಾಕಿ ಇಂಡಿಯಾ(ಎಚ್‌ಐ)ಸಲಿಮಾ ಟೇಟೆ ಅವರನ್ನು ಉಪ ನಾಯಕಿಯಾಗಿ ಆಯ್ಕೆ ಮಾಡಿದೆ.
ಇತ್ತೀಚೆಗೆ ಕೊನೆಗೊಂಡ ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ 14ರ ಪ್ರಾಯದ ಸಲಿಮಾ ಭಾರತದ ರಕ್ಷಣಾ ವಿಭಾಗದಲ್ಲಿ ರಿತು, ನೀಲು, ಸುಮನ್ ದೇವಿ ಹಾಗೂ ಗಗನ್‌ದೀಪ್ ಕೌರ್ ಅವರೊಂದಿಗೆ ಗಮನಾರ್ಹ ಪ್ರದರ್ಶನ ನೀಡಿದ್ದರು.
ತಂಡ:
ಗೋಲ್‌ಕೀಪರ್‌ಗಳು: ದಿವ್ಯಾ, ಅಲ್ಫಾ ಕೆರ್ಕೆಟ್ಟಾ.
ಡಿಫೆಂಡರ್‌ಗಳು: ಸಲಿಮಾ(ಉಪನಾಯಕಿ), ರಿತೂ, ನೀಲು ದಾದಿಯ, ಸುಮನ್‌ದೇವಿ, ಗಗನ್ ದೀಪ್ ಕೌರ್.
ಮಿಡ್ ಫೀಲ್ಡರ್‌ಗಳು: ಉದಿತಾ(ನಾಯಕಿ), ಮನ್‌ಪ್ರೀತ್ ಕೌರ್, ಜ್ಯೋತಿ, ಮರಿಯಾನಾ ಕುಜುರ್, ಮಹಿಮಾ ಚೌಧರಿ, ಲಾಲ್‌ರೆಮ್‌ಸಿಯಾಮಿ.
ಫಾರ್ವರ್ಡ್‌ಗಳು: ಸಂಗೀತಾ ಕುಮಾರಿ, ಪೂನಮ್, ಲೀಲಾವತಿ, ರಾಜ್ವಿಂದರ್ ಕೌರ್, ಮುಜ್ತಾಝ್ ಖಾನ್.