×
Ad

ಐಸಿಯುನಿಂದ ಸುಷ್ಮಾ ಸ್ಥಳಾಂತರ

Update: 2016-12-13 23:43 IST

ಹೊಸದಿಲ್ಲಿ,ಡಿ.13: ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿ ರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮೂರು ದಿನಗಳ ಬಳಿಕ ಮಂಗಳವಾರ ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಮತ್ತು ಅವರು ನಿರೀಕ್ಷಿಸಿದಂತೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಏಮ್ಸ್ ಆಸ್ಪತ್ರೆಯ ವಕ್ತಾರರು ತಿಳಿಸಿದರು.
ಶನಿವಾರ 50 ವೈದ್ಯರ ತಂಡವೊಂದು ಏಮ್ಸ್ ನಲ್ಲಿ 64ರ ಹರೆಯದ ಸಚಿವೆಯನ್ನು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸಗೊಳಪಡಿಸಿತ್ತು ಮತ್ತು ಬಳಿಕ ಅವರನ್ನು ಐಸಿಯು ನಲ್ಲಿ ಇಡಲಾಗಿತ್ತು.
ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಸೇರಿದಂತೆ ಭಾರೀ ಸಂಖ್ಯೆಯ ಜನರು ಸುಷ್ಮಾರ ಶೀಘ್ರ ಚೇತರಿಕೆಯನ್ನು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News