ಸೋನಮ್ ಕಪೂರ್ ಬಹಿರಂಗಪಡಿಸಿದ ಬಾಲ್ಯದ ಆಘಾತಕಾರಿ ಗುಟ್ಟು

Update: 2016-12-14 07:22 GMT

ಮುಂಬೈ, ಡಿ.14: ಬಾಲಿವುಡ್ ನಟಿ ಸೋನಮ್ ಕಪೂರ್‌ತಾವು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ ಎಂದು ಹೇಳಿ ತನ್ನ ಬಾಲ್ಯದ ದಿನಗಳ ಆಘಾತಕಾರಿ ಗುಟ್ಟೊಂದನ್ನು ಬಹಿರಂಗ ಪಡಿಸಿದ್ದಾರೆ.

ಪತ್ರಕರ್ತ ರಾಜೀವ್ ಮಸಂದ್ ಅವರೊಂದಿಗೆ ರೌಂಡ್ ಟೇಬಲ್ ಸರಣಿಯಂಗವಾಗಿ ಆಲಿಯಾ ಭಟ್, ರಾಧಿಕಾ ಆಪ್ಟೆ, ಅನುಷ್ಕಾ ಶರ್ಮ ಹಾಗೂ ವಿದ್ಯಾ ಬಾಲನ್ ಅವರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಸೋನಮ್ ಕಪೂರ್ ಈ ರೀತಿಯಾಗಿ ಹೇಳಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಥಾವಸ್ತು ಹೊಂದಿರುವ ವಿದ್ಯಾ ಬಾಲನ್ ಅವರ ಹೊಸ ಚಿತ್ರ ‘ಕಹಾನಿ 2’ ಸಂಬಂಧಿತವಾಗಿ ಈ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

‘‘ಬಾಲ್ಯದಲ್ಲಿ ನಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ. ಅದು ಆಘಾತಕಾರಿಯಾಗಿತ್ತು’’ ಎಂದು ಸೋನಮ್ ಹೇಳಿದ್ದರು. ‘‘ಅದು ಆಕೆಯ ತಪ್ಪಲ್ಲ, ಆದರೆ ಸಂತ್ರಸ್ತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅದೇ. ಎಲ್ಲರೂ ಸ್ವಯಂ ದೂಷಣೆ ಮಾಡುತ್ತಾರೆ’’ ಎಂದು ಅದಕ್ಕೆ ಪ್ರತಿಕ್ರಿಯಿಸಿದ ವಿದ್ಯಾ ನುಡಿದಿದ್ದರು.

ಅನುಷ್ಕಾ ಕೂಡ ಈ ಸಂಭಾಷಣೆಯಲ್ಲಿ ಭಾಗಿಯಾಗಿ ‘‘ಬಾಲ್ಯದಲ್ಲಿ ಯಾರಾದರೂ ನಿನ್ನನ್ನು ಅನುಚಿತವಾಗಿ ಮುಟ್ಟಿದ್ದಾರೆಯೇ ಎಂದು ನನ್ನ ತಾಯಿ ಆಗಾಗ ಕೇಳುತ್ತಿದ್ದರು. ಆಗ ನನಗೆ ಅರ್ಥವಾಗುತ್ತಿರಲಿಲ್ಲ. ತಾಯಿಗೆ ಏನೋ ಆಗಿದೆ ಎಂದು ನಾನಂದುಕೊಳ್ಳುತ್ತಿದ್ದೆ’’ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News