ಅಧ್ಯಾಪಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ: ವಿಷಯ ಅಡಗಿಸಿಟ್ಟ ಮಹಿಳಾ ಪ್ರಾಂಶುಪಾಲೆಯ ಬಂಧನ

Update: 2016-12-14 10:58 GMT

ಮುಂಬೈ,ಡಿ. 14: ನವಿ ಮುಂಬೈಯಲ್ಲಿ 13ವರ್ಷ ಪ್ರಾಯದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಅಧ್ಯಾಪಕನೇ ಅತ್ಯಾಚಾರಗೈದ ಘಟನೆ ವರದಿಯಾಗಿದೆ. ವಿಷಯ ತಿಳಿದು ಹೆತ್ತವರು ಮತ್ತು ಊರವರು ಶಾಲೆಯ ಪ್ರಾಂಗಣಕ್ಕೆ ನುಗ್ಗಿದ್ದು ಘರ್ಷಣೆಯ ವಾತಾವರಣವನ್ನು ಹುಟ್ಟುಹಾಕಿತ್ತು. ತಂದೆ ತಾಯಿ ವಿಷಯ ತಿಳಿಸಿದರೂ ಪೊಲೀಸರಿಗೆ ದೂರು ನೀಡದಿದ್ದ ಮಹಿಳಾ ಪ್ರಾಂಶುಪಾಲೆಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ಅಧ್ಯಾಪಕ ಬಾಲಕಿಯ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಲಾಗಿದೆ. ಇತ್ತೀಚೆಗೆ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತಾಯಿಗೆ ವಿಷಯ ತಿಳಿಸಿದಾಗ ವೈದ್ಯಕೀಯ ತಪಾಸಣೆಗೆ ಅವರು ಕರೆದೊಯ್ದಿದ್ದರು. ವೈದ್ಯರು ಬಾಲಕಿ ನಾಲ್ಕುತಿಂಗಳ ಗರ್ಭಿಣಿಯೆಂದು ತಿಳಿಸಿದರು ನಂತರ ಬಾಲಕಿಯ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಅಧ್ಯಾಪಕ ತಲೆತಪ್ಪಿಸಿಕೊಂಡಿದ್ದಾನೆ. ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿ ಅವನ ಪತ್ತೆಗೆ ಜಾಲ ಬೀಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News