×
Ad

ಡಿಜಿಟಲ್ ಪಾವತಿ ಆರಂಭಿಸಿ: ರೂ.1 ಕೋಟಿ ಬಹುಮಾನ ಪಡೆಯಿರಿ!

Update: 2016-12-15 20:13 IST

ಹೊಸದಿಲ್ಲಿ, ಡಿ.14: ಡಿಜಿಟಲ್ ಮಾಧ್ಯಮದ ಮೂಲಕ ಹಣ ಪಾವತಿಯನ್ನು ಮಾಡುವವರಿಗೆ ನೀತಿ ಆಯೋಗವು ಗುರುವಾರ ಬಹುಮಾನಗಳನ್ನು ಘೋಷಿಸಿದೆ. ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್, ಪತ್ರಿಕಾ ಗೋಷ್ಠಿಯೊಂದರಲ್ಲಿ ಈ ಮಹತ್ವದ ಘೋಷನೆ ಮಾಡಿದ್ದಾರೆ.

‘ಕ್ರಿಸ್ಮಸ್‌ನಿಂದ ಆರಂಭಿಸಿ 100 ದಿನಗಳ ವರೆಗೆ 15 ಸಾವಿರ ಮಂದಿ ವಿಜೇತರು ತಲಾ ರೂ.1 ಸಾವಿರ ಪಡೆಯಲಿದ್ದಾರೆ. ಈ ಯೋಜನೆ 2016ರ ಡಿ.25ರಿಂದ 2017ರ ಎ.14ರ ವರೆಗೆ ಚಾಲ್ತಿಯಲ್ಲಿರುತ್ತದೆ.

7 ಸಾವಿರ ಸಾಪ್ತಾಹಿಕ ಡ್ರಾಗಳಲ್ಲಿ ಬಳಕೆದಾರರಿಗೆ ತಲಾ ರೂ. 1 ಲಕ್ಷ ಗರಿಷ್ಠ ಬಹುಮಾನ ವ್ಯಾಪಾರಿಗಳಿಗೆ ತಲಾ ರೂ.50 ಸಾವಿರದ ಗರಿಷ್ಠ ಬಹುಮಾನವಿದೆ.

ಎ.14ರಂದು ಬಳಕೆದಾರರಿಗೆ ರೂ.1 ಕೋಟಿಯ ಮೆಗಾ ಬಹುಮಾನವೊಂದನ್ನು ಘೋಷಿಸಲಾಗುವುದು. ರೂ.50 ಲಕ್ಷ ಎರಡನೆ ಬಹುಮಾನ ಹಾಗೂ ರೂ.25 ಲಕ್ಷ ಮೂರನೆಯ ಬಹುಮಾನವಿದೆ.

ಈ ಯೋಜನೆಗೆ ರೂ.5 ಸಾವಿರದ ಮೇಲಿನ ಹಾಗೂ ರೂ.50ರ ಕೆಳಗಿನ ವಹಿವಾಟನ್ನು ಪರಿಗಣಿಸಲಾಗುವುದಿಲ್ಲ. ಬಿ2ಬಿ ವರ್ಗಾವಣೆಗಳಿಗೂ ಇದು ಅನ್ವಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News