×
Ad

ಮುನ್ನಾಭಾಯಿ ಬಯೋಪಿಕ್ ನಲ್ಲಿ ಸುನೀಲ್ ದತ್ತ್ ಆಗಲಿದ್ದಾರೆ ಅ ಕ್ಷಯ್‌ ಖನ್ನಾ

Update: 2016-12-15 23:51 IST

ಬಾಲಿವುಡ್‌ನಲ್ಲಿ ಬಯೋಪಿಕ್ ಚಿತ್ರಗಳಿಗೆ ಈಗ ಸುವರ್ಣಯುಗ. ಭಾಗ್ ಮಿಲ್ಕಾ ಭಾಗ್, ಧೋನಿ, ಮೇರಿಕೋಮ್ ಹೀಗೆ ಸಾಧಕರ ಜೀವನಕತೆಯನ್ನು ಆಧರಿಸಿದ ಚಿತ್ರಗಳು ಸಾಲುಸಾಲಾಗಿ ತೆರೆಕಾಣುತ್ತಿವೆ. ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿಯೂ ಹಣ ಬಾಚುತ್ತಿವೆ.

ಇದೀಗ ಬಾಲಿವುಡ್ ನಟ ಸಂಜಯ್‌ದತ್ತ್ ಬದುಕಿನ ಹಿನ್ನೆಲೆಯ ಚಿತ್ರವೊಂದು ಸೆಟ್ಟೇರಲು ತಯಾರಾಗುತ್ತಿದೆ. ರಾಜಕುಮಾರ್ ಹಿರಾನಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್‌ನ ರೋಮ್ಯಾಂಟಿಕ್ ನಟ ರಣಬೀರ್ ಕಪೂರ್, ಸಂಜಯ್‌ದತ್ತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ತಂದೆ ಸುನೀಲ್ ದತ್ತ್ ಪಾತ್ರಕ್ಕೆ ಇನ್ನೋರ್ವ ಪ್ರತಿಭಾವಂತ ನಟ ಅಕ್ಷಯ್‌ಖನ್ನಾ ಆಯ್ಕೆಯಾಗಿದ್ದಾರೆ.

ನಾಲ್ಕು ವರ್ಷಗಳ ಸುದೀರ್ಘ ಅಜ್ಞಾತವಾಸದ ಬಳಿಕ ಅಕ್ಷಯ್ ಖನ್ನಾ, ಈ ವರ್ಷ ತೆರೆಕಂಡ ರೋಹಿತ್ ಧವನ್ ನಿರ್ದೇಶನದ ಡಿಶೂಂ ಮೂಲಕ ಮತ್ತೆ ಬೆಳ್ಳಿತೆರೆಗೆ ವಾಪಸಾಗಿದ್ದರು. ಹೀಗಾಗಿ ಸುನೀಲ್‌ದತ್ತ್ ಪಾತ್ರವು ತನ್ನ ಸಿನೆಮಾ ಬದುಕಿನಲ್ಲಿ ಹೊಸ ಬ್ರೇಕ್ ನೀಡಲಿದೆಯೆಂಬ ಆತ್ಮವಿಶ್ವಾಸವನ್ನು ಅಕ್ಷಯ್ ಹೊಂದಿದ್ದಾರೆ.ಅಂದಹಾಗೆ ಸುನೀಲ್ ದತ್ತ್ ಪತ್ನಿ, ಖ್ಯಾತ ನಟಿ ನರ್ಗೀಸ್ ಪಾತ್ರವನ್ನು ಖ್ಯಾತ ನಟಿ ಟಬೂ ನಿರ್ವಹಿಸಲಿದ್ದಾರೆ. ಮೆಹಬೂಬ್‌ಖಾನ್ ನಿರ್ಮಾಣದ ‘ಮದರ್ ಇಂಡಿಯಾ’ ಮೂಲಕ ಸೂಪರ್‌ಸ್ಟಾರ್ ಪಟ್ಟಕ್ಕೇರಿದ ಸುನೀಲ್‌ದತ್ತ್ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. 80ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದ ಸುನೀಲ್‌ದತ್ತ್ ಸಂಸದನಾಗಿಯೂ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News