×
Ad

ಬುಲಂದ್ ಶಹರ್ ಅತ್ಯಾಚಾರ ಪ್ರಕರಣ: ಉತ್ತರಪ್ರದೇಶ ಸಚಿವ ಆಝಂಖಾನ್‌ರ ಕ್ಷಮಾಪಣೆ ಸುಪ್ರೀಂಕೋರ್ಟ್ ನಲ್ಲಿ ಸ್ವೀಕಾರ

Update: 2016-12-16 17:12 IST

ಹೊಸದಿಲ್ಲಿ,ಡಿಸೆಂಬರ್ 16: ಉತ್ತರಪ್ರದೇಶದ ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಲಿಪಶುಗಳನ್ನುಅಪಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದ ಉತ್ತರಪ್ರದೇಶದ ಕ್ಯಾಬಿನೆಟ್ ಸಚಿವ ಆಝಂಖಾನ್‌ರ ನಿಶರ್ತ ಕ್ಷಮಾಪಣೆಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ ಎಂದು ವರದಿಯಾಗಿದೆ.

ತಪ್ಪು ಹೇಳಿಕೆಯನ್ನು ನೀಡಿದ್ದಕ್ಕಾಗಿ ತಾನು ಪಶ್ಚಾತ್ತಾಪಪಡುತ್ತಿದ್ದೇನೆ ಎಂದು ಆಝಂಖಾನ್ ಬರವಣಿಗೆ ಮೂಲಕ ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಸಚಿವರೂ ಸಮಾಜವಾದಿ ಪಾರ್ಟಿ ಹಿರಿಯ ನಾಯಕರೂ ಆಗಿರು ಆಝಂ ಖಾನ್ ಸಲ್ಲಿಸಿದ ಹೊಸ ಅಫಿದಾವಿತ್ ಜಸ್ಟಿಸ್ ದೀಪಕ್ ಮಿಶ್ರ, ಜಸ್ಟಿಸ್ ಅಮಿತಾವರಾಯ್‌ರ ಪೀಠ ಪರಿಗಣಿಸಿತ್ತು.

 ಕಳೆದ ಜುಲೈ 29ಕ್ಕೆ ರಾತ್ರಿಯ ವೇಳೆ ರಾಷ್ಟ್ರೀಯ ಹೆದ್ದಾರಿ 91ರಲ್ಲಿ ನೋಯ್ಡಾ ಶಾಜಹಾನ್ಪುರ್‌ದ ನಡುವೆ ಕಾರಿನಲ್ಲಿ ಸಂಚರಿಸುತ್ತಿದ್ದ ಕುಟುಂಬವನ್ನು ತಡೆದು ನಿಲ್ಲಿಸಿ ತಾಯಿ ಮತ್ತು ಹದಿನಾಲ್ಕು ವರ್ಷದ ಪುತ್ರಿಯನ್ನು ಎಳೆದುಕೊಂಡು ಹೋಗಿ ಗೂಂಡಾಗಳ ತಂಡ ಅತ್ಯಾಚಾರ ವೆಸಗಿದ್ದು ಉತ್ತರಪ್ರದೇಶದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.

ಈ ಘಟನೆಯ ಬಗ್ಗೆ ಉಲ್ಲೇಖಿಸಿದ ಆಝಂಖಾನ್ ಇದು ಸರಕಾರಕ್ಕೆ ಕಪ್ಪು ಬಣ್ಣ ಬಳಿಯಲು ನಡೆಸುವ ಯತ್ನವೆಂದುಟೀಕಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News