ಸರಿತಾ ನಾಯರ್, ರಾಧಾಕೃಷ್ಣನ್‌ಗೆ 3 ವರ್ಷ ಜೈಲು
Update: 2016-12-16 17:13 IST
ತಿರುವನಂತಪುರ, ಡಿ.16: ಕೇರಳದಲ್ಲಿ ಮೂರು ವರ್ಷಗಳ ಹಿಂದೆ ಬೆಳಕಿಗೆ ಬಂದ ಸೋಲಾರ್ ಹಗರಣಕ್ಕೆ ಸಂಬಂಧಿಸಿ ಎರ್ನಾಕುಲಂನ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗಳಾದ ಸರಿತಾ ನಾಯರ್ ಹಾಗೂ ಬಿಜು ರಾಧಾಕೃಷ್ಣನ್‌ಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಆದೇಶಿಸಿದೆ.
3 ವರ್ಷಗಳ ಹಿಂದೆ ಕೇರಳದಲ್ಲಿ ಕೋಟ್ಯಂತರ ರೂ. ಸೋಲಾರ್ ಹಗರಣ ನಡೆದಿತ್ತು. ಸರಿತಾ ನಾಯರ್ ಹಾಗೂ ರಾಧಾಕೃಷ್ಣನ್ 2011ರಲ್ಲಿ ಸೋಲಾರ್ ಕಂಪೆನಿ ಸ್ಥಾಪಿಸಿದ್ದರು. ಹಗರಣ ಬೆಳಕಿಗೆ ಬಂದಾಗ ಕೇರಳದಲ್ಲಿ ಉಮನ್ ಚಾಂಡಿ ನೇತೃತ್ವದ ಸರಕಾರ ಅಧಿಕಾರದಲ್ಲಿತ್ತು.