×
Ad

ತೈಲ ಬೆಲೆ ಹೆಚ್ಚಳ ಮುಂದೂಡಿಕೆ

Update: 2016-12-16 19:45 IST

ಹೊಸದಿಲ್ಲಿ, ಡಿ.16: ಪೆಟ್ರೋಲ್ ಲೀಟರ್‌ಗೆ ರೂ 2.26 ಹಾಗೂ ಡೀಸೆಲ್‌ಗೆ ರೂ.1.78 ಹೆಚ್ಚಿಸುವ ಯೋಜನೆಯನ್ನು ಸಾರ್ವಜನಿಕ ವಲಯದ ತೈಲ ಸಂಸ್ಥೆಗಳು ಮುಂದೂಡಿದೆ.

ಗ್ಯಾಸೋಲಿನ್‌ನ(ಪೆಟ್ರೋಲ್) ಅಂತಾರಾಷ್ಟ್ರೀಯ ದರ ಬ್ಯಾರಲ್‌ಗೆ 57.43 ಡಾಲರ್ ಇದ್ದುದು 62.82 ದಾಲರ್‌ಗೇರಿದುದರಿಂದ ಬೆಲೆ ಹೆಚ್ಚಳ ಅನಿವಾರ್ಯವಾಗಿತ್ತಾದರೂ ಈ ಯೋಜನೆಯನ್ನು ತಡೆ ಹಿಡಿಯಲಾಗಿದೆ.

ಡಾಲರ್‌ನೆದುರು ರೂಪಾಯಿಯ ಬೆಲೆ 68.23ರಿಂದ 68.05ಕ್ಕೆ ಏರಿದ ಕಾರಣ ಅಂತಾರಾಷ್ಟ್ರೀಯ ಪೆಟ್ರೋಲಿಯಂ ಬೆಲೆ ಹೆಚ್ಚಳವಾಗಿದ್ದು, ಪೆಟ್ರೋಲ್ ಲೀ.ಗೆ ರೂ. 2.26 ಹಾಗೂ ಡೀಸೆಲ್‌ಗೆ ರೂ.1.78 ಬೆಲೆ ಹೆಚ್ಚಳ ಅಗತ್ಯವಾಗಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News