ಇದೇ ಮೊದಲ ಬಾರಿ ಅರ್ನಬ್ ನನ್ನು ನೋಡಿ ನೀವು ಹೊಟ್ಟೆ ತುಂಬಾ ನಗುತ್ತೀರಿ

Update: 2016-12-17 10:33 GMT

ಮುಂಬೈ, ಡಿ.17: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಖ್ಯಾತ ಕಾಮಿಡಿ ಕಾರ್ಯಕ್ರಮ ದಿ ಕಪಿಲ್ ಶರ್ಮ ಶೋ ಇದರಲ್ಲಿ ಡಾ.ಮಶೂರ್ ಗುಲಾಟಿಯಾಗಿ ಅಭಿನಯಿಸುತ್ತಿರುವ ಸುನಿಲ್ ಗ್ರೋವರ್ ಒಬ್ಬ ಜನಪ್ರಿಯ ಮತ್ತು ಪ್ರತಿಭಾವಂತ ಕಲಾವಿದನೆನ್ನುವುದರಲ್ಲಿ ಎರಡು ಮಾತಿಲ್ಲ. ಕಪಿಲ್ ಶರ್ಮಾ ಶೋನಲ್ಲಿ ಮಶೂರ್ ಗುಲಾಟಿ ಮಾಡುವ ಹಲವು ಚೇಷ್ಟೆಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ.

ಇದೀಗ ಸುನಿಲ್ ಗ್ರೋವರ್ ಕಾಫಿ ವಿದ್ ಡಿ ಎಂಬ ಚಲನಚಿತ್ರದಲ್ಲಿ ಜನಪ್ರಿಯ ಟಿವಿ ಆ್ಯಂಕರ್ ಅರ್ನಬ್ ಗೋಸ್ವಾಮಿಯವರ ವ್ಯಕ್ತಿತ್ವವನ್ನೇ ಹೋಲುವ ಅರ್ನಬ್ ಘೋಷ್ ಎಂಬ ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಲಿದ್ದು ಈ ಚಿತ್ರದಲ್ಲಿ ಅರ್ನಬ್ ತನ್ನ ಕುಸಿಯುತ್ತಿರುವ ಜನಪ್ರಿಯತೆಯನ್ನು ಹೆಚ್ಚಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂದರ್ಶನ ಏರ್ಪಡಿಸುತ್ತಾನೆ.

ತನ್ನ ಪಾತ್ರದ ಗ್ಗೆ ವಿವರಿಸಿದ ಗ್ರೋವರ್ ತಾನು ಈ ಚಿತ್ರದಲ್ಲಿ ಅರ್ನಬ್ ಅವರನ್ನು ಅನುಕರಿಸುತ್ತಿಲ್ಲವಾದರೂ ತಿಳಿಯದೆಯೇ ಅರ್ನಬ್ ಅವರು ತನ್ನ ಮೇಲೆ ಪ್ರಭಾವ ಬೀರಿರಬಹುದು ಎಂದು ಗ್ರೋವರ್ ಹೇಳಿದ್ದಾರೆ.
ಝಾಕೀರ್ ಹುಸೈನ್ ಈ ಚಿತ್ರದಲ್ಲಿ ದಾವೂದ್ ಪಾತ್ರ ಮಾಡಲಿದ್ದಾರೆ.
ಚಿತ್ರದ ಟ್ರೈಲರ್ ಶನಿವಾರ ಬಿಡುಗಡೆಯಾಗಿದ್ದು ನಿರೀಕ್ಷಿಸಿದಂತೆ ಅದು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News