14ರ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
Update: 2016-12-17 19:00 IST
ಹೊಸದಿಲ್ಲಿ,ಡಿ.17: ಪೂರ್ವ ದಿಲ್ಲಿಯ ನ್ಯೂ ಅಶೋಕ ನಗರ ಪ್ರದೇಶದಲ್ಲಿ ಜಮೀನುದಾರ ಮತ್ತು ಇತರ ಇಬ್ಬರು ಸೇರಿಕೊಂಡು 14ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಬಾಲಕಿಯ ದೂರಿನ ಮೇರೆಗೆ ಎಲ್ಲ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಈ ಬಾಲಕಿ ಅಪಘಾತಕ್ಕೆ ಗುರಿಯಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ ಸಂಬಂಧಿಯ ಆರೈಕೆಗೆಂದು ದಿಲ್ಲಿಗೆ ಬಂದಿದ್ದಳು.
ಮನೆಯಿಂದ ಬಾಲಕಿಯನ್ನು ಅಪಹರಿಸಿದ್ದ ಆರೋಪಿಗಳು, ಬಲವಂತದಿಂದ ಮಾದಕ ದ್ರವ್ಯ ಸೇವಿಸುವಂತೆ ಮಾಡಿ ಸರಣಿ ಅತ್ಯಾಚಾರ ನಡೆಸಿ ಬಳಿಕ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಐದು ಗಂಟೆಗಳ ಬಳಿಕ ಬಾಲಕಿ ಪತ್ತೆಯಾಗಿದ್ದಳು.