ರ್ಯಾಗಿಂಗ್: 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
Update: 2016-12-17 23:44 IST
ಕೊಟ್ಟಾಯಂ,ಡಿ.17: ಹಾಸ್ಟೆಲ್‌ನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಆರೋಪದಲ್ಲಿ ಇಲ್ಲಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಂಟು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳನ್ನು ತರಗತಿಗಳಿಂದ ಅಮಾನತುಗೊಳಿಸಲಾಗಿದೆ.
ಹಿರಿಯ ವಿದ್ಯಾರ್ಥಿಗಳ ಕ್ರೌರ್ಯದಿಂದಾಗಿ ಮೊದಲ ವರ್ಷದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ತ್ರಿಶೂರು ಮತ್ತು ಎರ್ನಾಕುಲಂ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇಬ್ಬರೂ ಪ್ರತ್ಯೇಕ ಪೊಲೀಸ್ ದೂರುಗಳನ್ನು ಸಲ್ಲಿಸಿದ್ದು, ಎರಡೂ ಪ್ರಕರಣಗಳಲ್ಲಿಯು ಆರೋಪಿಗಳು ಒಂದೇ ಗುಂಪಿಗೆ ಸೇರಿದವರಾಗಿದ್ದಾರೆ.
ಆರೋಪಿಗಳು ತಮ್ಮಿಂದ ಸುಮಾರು ಆರು ಗಂಟೆಗಳ ಕಾಲ ಪುಷ್ ಅಪ್‌ನಂತಹ ತೀವ್ರ ವ್ಯಾಯಾಮ ಮಾಡಿಸುತ್ತಿದ್ದರಲ್ಲದೆ, ಬಲವಂತದಿಂದ ಮದ್ಯವನ್ನೂ ಕುಡಿಸುತ್ತಿದ್ದರು ಎಂದು ಗಾಯಾಳು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.