×
Ad

ರಾಜಕೀಯ ಪಕ್ಷಗಳಿಗೆ 2,000 ರೂ.ಗಳ ಅನಾಮಿಕ ದೇಣಿಗೆಗಳನ್ನು ನಿಷೇಧಿಸಿ: ಚು.ಆಯೋಗದ ಆಗ್ರಹ

Update: 2016-12-18 16:30 IST

ಹೊಸದಿಲ್ಲಿ,ಡಿ.18: ಚುನಾವಣೆಗಳಲ್ಲಿ ಕಪ್ಪುಹಣದ ಹರಿವಿಗೆ ಕಡಿವಾಣ ಹಾಕಲು ಬಯಸಿರುವ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ 2,000 ರೂ.ಮತ್ತು ಅದಕ್ಕಿಂತ ಹೆಚ್ಚಿನ ಅನಾಮಧೇಯ ದೇಣಿಗೆಗಳನ್ನು ನಿಷೇಧಿಸುವಂತೆ ಸರಕಾರವನ್ನು ಆಗ್ರಹಿಸಿದೆ.

ರಾಜಕೀಯ ಪಕ್ಷಗಳಿಂದ ಅನಾಮಧೇಯ ದೇಣಿಗೆಗಳ ಸ್ವೀಕಾರಕ್ಕೆ ಯಾವುದೇ ಸಾಂವಿಧಾನಿಕ ಅಥವಾ ಶಾಸನಾತ್ಮಕ ನಿರ್ಬಂಧವಿಲ್ಲ. ಆದರೆ ಜನ ಪ್ರಾತಿನಿಧ್ಯ ಕಾಯ್ದೆ,1951ರ ಕಲಂ 29 ಸಿ ಅಡಿ ದೇಣಿಗೆಗಳ ಘೋಷಣೆ ಅಗತ್ಯವಾಗಿರುವುದರಿಂದ ಅನಾಮಧೇಯ ದೇಣಿಗೆಗಳ ಮೇಲೆ ‘ಪರೋಕ್ಷ ಭಾಗಶಃ ನಿಷೇಧ ’ವಿದೆ. ಆದರೆ ಇಂತಹ ಘೋಷಣೆಗಳನ್ನು 20,000 ರೂ.ಗಿಂತ ಹೆಚ್ಚಿನ ದೇಣಿಗೆಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ.

ಚುನಾವಣಾ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ಮತ್ತು ಉದ್ದೇಶಿತ ಚುನಾವಣಾ ಸುಧಾರಣೆಗಳ ಭಾಗವಾಗಿರುವ ಪ್ರಸ್ತಾವಿತ ತಿದ್ದುಪಡಿಯಲ್ಲಿ 2,000 ರೂ.ಮತ್ತು ಅದಕ್ಕೂ ಹೆಚ್ಚಿನ ಅನಾಮಧೇಯ ದೇಣಿಗೆಗಳನ್ನು ನಿಷೇಧಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News