×
Ad

ಗಮನಸೆಳೆದ ಪ್ಯಾಶಿಸ್ಟ್ ವಿರೋಧಿ ಕಿರುಚಿತ್ರ 'ಗೋ ಆ್ಯಂಡ್ ಗೋಡ್ಸೆ'

Update: 2016-12-18 17:39 IST

ಕೊಡುವಳ್ಳಿ,ಡಿ.18: ಯುಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಳವಾದ ಚಿಂತನೆ, ಅನುಭವಗಳ ಕಾಠಿಣ್ಯದತ್ತ ನುಸುಳುವ ಸಂಭಾಷಣೆಗಳು, ದೃಶ್ಯಗಳು, ಕವಿತೆಯನ್ನು ಸಮನ್ವಯಗೊಳಿಸಿದ ಫ್ಯಾಶಿಸ್ಟ್ ವಿರೋಧಿ ಕಿರುಚಿತ್ರ ’ಗೋ ಆ್ಯಂಡ್ ಗೋಡ್ಸೆ’ ಜನರ ಗಮನವನ್ನು ಸೆಳೆಯುತ್ತಿದೆ. ಈಗಾಗಲೇ ಆರು ನಿಮಿಷಗಳ ಚಿತ್ರವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಮಹಾತ್ಮಗಾಂಧಿ ಎದೆಗೆ ಬಡಿದಿದ್ದ ಗುಂಡು ಕೋಟ್ಯಂತರ ಭಾರತೀಯ ಜನರ ಸ್ವಾಭಿಮಾನಕ್ಕೆ ಬಡಿದಪ್ಪಳಿಸಿದ ಏಟೆಂದು ಈ ಶಾರ್ಟ್‌ಫಿಲಂ ನೆನಪಿಸುತ್ತದೆ . ಬಾಬರಿ ಮಸೀದಿ, ಗುಜರಾತ್ ನರಮೇಧ, ದಾದ್ರಿ ಕಗ್ಗೊಲೆ, ದಲಿತ್ ಬೇಟೆ, ಜೆಎನ್‌ಯು ಘಟನೆ, ಕಲಬುರ್ಗಿಮತ್ತು ಕನ್ಹಯ್ಯ ಕುಮಾರ್, ರೋಹಿತ್ ವೇಮುಲಾ ಸಹಿತ ಪ್ರತಿಭಟನೆಯ ಹೆಗ್ಗುರುತುಗಳು ಹಾಗೂ ಹಿಂದೂ ಫ್ಯಾಶಿಸ್ಟ್ ನರಮೇಧಗಳು, ಗುಜರಾತ್ ದಲಿತ ಪ್ರತಿಭಟನೆ ಈ ಕಿರುಚಿತ್ರದಲ್ಲಿದೆ.

ಕವಿ ಪ್ರಭಾ ವರ್ಮ ಅವರ ಗಾಂಧಿ ಕವಿತೆ ಆಧಾರದಲ್ಲಿ ಕಿರು ಚಿತ್ರವನ್ನು ತಯಾರಿಸಲಾಗಿದೆ. ನಾಟಕಕಾರ ಧ್ವನಿಗ್ರಾಹಕ ತಂಗಯಂ ಶಶೀಂದ್ರಕುಮಾರ್ ಚಿತ್ರಕ್ಕೆ ಸಂಭಾಷಣೆ ಬರೆದು ದು ಧ್ವನಿ ಸಂಕಲನ ಮಾಡಿದ್ದಾರೆ. ಕೊಡುವಳ್ಳಿ ಕೆಎಂಒ ಇಂಗ್ಲಿಷ್ ಮೀಡಿಯಂ ಶಾಲೆಯ ಆರನೆ ತರಗತಿ ವಿದ್ಯಾರ್ಥಿನಿ ನಿಲೋಫರ್ ನಟಿಸಿ ಹಾಡಿದ್ದು, ಆಕೆಯ ಸಹೋದರ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದಾನೆ. ಸಾಂಸ್ಕೃತಿಕ ಕಾರ್ಯಕರ್ತ ಅನಿಲ್ ವವಾಡ್‌ರ ಆಶಯವನ್ನು ಚಿತ್ರ ಒಳಗೊಂಡಿದೆ ಎಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News