ರಾಷ್ಟ್ರಗೀತೆ ವಿವಾದ: ನಿರ್ದೇಶಕ ಕಮಲ್‌ರನ್ನು ಬೆಂಬಲಿಸಿದ ಪಿಣರಾಯಿ
ಕ್ಯಾಲಿಕಟ್,ಡಿ.18: ರಾಷ್ಟ್ರ ಗೀತೆ ವಿವಾದ ಪ್ರಕರಣದಲ್ಲಿ, ಕೇರಳ ಚಲನಚಿತ್ರ ಅಕಾಡಮಿ ಅಧ್ಯಕ್ಷ ಹಾಗೂ ಮಳೆಯಾಳಂ ಚಲನಚಿತ್ರರಂಗ ದ ಪ್ರಸಿದ್ಧ ನಿರ್ದೇಶಕ ಕಮಲ್‌ರನ್ನು ಬೆಂಬಲಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದು, ಕೋಮುಭಾವನೆ ಕೆರಳಿಸಲು ರಾಷ್ಟ್ರಗೀತೆಯನ್ನು ಬಳಸಲಾಗುತ್ತಿದೆ ಎಂದಿದ್ದಾರೆ. ಕಮಲ್‌ರ ನಿಲುವನ್ನು ಪ್ರತಿಭಟಿಸುವ ವೇಳೆ ಕಮಾಲುದ್ದೀನ್ ಎಂದು ರಾಗವೆಳೆದು ಕರೆಯುವ ಮೂಲಕ ಸಂಘಪರಿವಾರದ ಜನರು ಕೋಮುವಾದ ಮತ್ತು ಅಸಹಿಷ್ಣುತೆಯನ್ನು ಕೆರಳಿಸಲುಯತ್ನಿಸಿದ್ದಾರೆಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೇರಳದಲ್ಲಿ ಸಂಘಪರಿವಾರದ ಈ ಆಟ ನಡೆಯಲಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೊಡುಂಗಲ್ಲೂರಿನಲ್ಲಿರುವ ಕಮಲ್ ಅವರ ವಸತಿಯ ಮುಂದೆ ಸಂಘಪರಿವಾರ ಪ್ರತಿಭಟಿಸುವ ಮೂಲಕ ವಿಷಯವನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಲಾಭಗಳಿಸಲು ಶ್ರಮಿಸಿದೆ. ಕಮಲ್‌ಗೆ ಸರ್ಟಿಫಿಕೆಟ್ ಕೊಡುವ ಸಂಘಪರಿವಾರದ ಯತ್ನವಿದು. ಆದರೆ ಅದರ ಅಗತ್ಯ ಅವರಿಗಿಲ್ಲ ಎಂದ ಮುಖ್ಯಮಂತ್ರಿ, ಸಮಸ್ಯೆಸೃಷ್ಟಿಸುವವರನ್ನು ಸರಕಾರ ಮಟ್ಟಹಾಕಲಿದೆ ಎನ್ನುವ ಎಚ್ಚರಿಕೆಯನ್ನುಕೂಡಾ ನೀಡಿದರೆಂದು ವರದಿತಿಳಿಸಿದೆ.