×
Ad

ಜಗನ್ ಮತ್ತು ಇತರರ ವಿರುದ್ಧ 749 ಕೋ.ರೂ.ಗಳ ಇಡಿ ಜಪ್ತಿ ಆದೇಶಕ್ಕೆ ನ್ಯಾಯಾಲಯದ ದೃಢೀಕರಣ

Update: 2016-12-18 19:09 IST

ಹೊಸದಿಲ್ಲಿ,ಡಿ.18: ಹಣ ಚೆಲುವೆ ಪ್ರಕರಣವೊಂದರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಅವರ ಪತ್ನಿ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ)ವು ಹೊರಡಿಸಿದ್ದ 749 ಕೋ.ರೂ.ಗೂ ಅಧಿಕ ವೌಲ್ಯದ ಆಸ್ತಿಗಳ ಜಪ್ತಿ ಆದೇಶವನ್ನು ಇಲ್ಲಿಯ ವಿಶೇಷ ಹಣ ಚೆಲುವೆ ನಿಗ್ರಹ ನ್ಯಾಯಾಲಯವು ದೃಢಪಡಿಸಿದೆ.

ಹಣ ಚೆಲುವೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಜಗನ್ ವಿರುದ್ಧದ ತನ್ನ ತನಿಖೆಯ ಅಂಗವಾಗಿ ಇಡಿ ಈ ವರ್ಷದ ಜೂನ್‌ನಲ್ಲಿ ಈ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು.

ಆರೋಪಿಗಳು ಉಲ್ಲೇಖಿಸಲಾದ ಅಪರಾಧವನ್ನೆಸಗಿದ್ದಾರೆ, ತನ್ಮೂಲಕ ಹಣವನ್ನು ಸಂಗ್ರಹಿಸಿದ್ದಾರೆ ಮತ್ತು ಹೀಗೆ ಸಂಗ್ರಹಿತ ಕಪ್ಪುಹಣವನ್ನು ಬಿಳಿಯಾಗಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಧ್ಯಕ್ಷ ಮುಕೇಶ ಕುಮಾರ್ ನೇತೃತ್ವದ ಪಿಎಂಎಲ್‌ಎ ನ್ಯಾಯಾಲಯದ ತ್ರಿಸದಸ್ಯ ಪೀಠವು ಹೇಳಿದೆ.

ಜಗನ್ ಅಕ್ರಮವಾಗಿ ಗಳಿಸಿದ್ದ ಹಣವನ್ನು ತನ್ನ ಸಮೂಹ ಕಂಪನಿಗಳಾದ ಸಂಡೂರ ಪವರ್ ಕಂಪನಿ, ಕ್ಲಾಸಿಕ್ ರಿಯಾಲ್ಟಿ, ಸಿಲಿಕಾನ್ ಬಿಲ್ಡರ್ಸ್, ಸರಸ್ವತಿ ಪವರ್ ಆ್ಯಂಡ್ ಇಂಡಸ್ಟ್ರೀಸ್ ಮತ್ತು ಇತರ ಹತ್ತು ಕಂಪನಿಗಳ ಮೂಲಕ ಹೂಡಿಕೆಗಳು,ಚರ ಮತ್ತು ಸ್ಥಿರ ಆಸ್ತಿಗಳು, ಮೂರನೆ ವ್ಯಕ್ತಿಗೆ ಪಾವತಿ ಇತ್ಯಾದಿಗಳಲ್ಲಿ ತೊಡಗಿಸಿ ಬಿಳಿಯಾಗಿಸಿದ್ದರು ಎಂದು ಇಡಿ ಜೂನ್‌ನಲ್ಲಿ ಜಪ್ತಿ ಆದೇಶವನ್ನು ಹೊರಡಿಸುವಾಗ ಹೇಳಿತ್ತು. ಇಡಿ ಜಪ್ತಿ ಮಾಡಿರುವ ಜಗನ್ ಆಸ್ತಿಗಳು ತೆಲಂಗಾಣ,ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ಹರಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News