×
Ad

ಸೂಪರ್ ಡ್ಯಾನ್ಸರ್: 9ರ ಹರೆಯದ ದಿತ್ಯಾ ಭಾಂಡೆಗೆ ಗೆಲುವಿನ ಮುಕುಟ

Update: 2016-12-18 19:13 IST

ಮುಂಬೈ,ಡಿ.18: ಮಕ್ಕಳಿಗಾಗಿ ಸೋನಿ ಟಿವಿ ಆಯೋಜಿಸಿದ್ದ ಡ್ಯಾನ್ಸ್ ರಿಯಾಲಿಟಿ ಶೋ ‘ಸೂಪರ್ ಡ್ಯಾನ್ಸರ್’ ನಲ್ಲಿ ಮಹಾರಾಷ್ಟ್ರದ ಒಂಬತ್ತರ ಹರೆಯದ ಬಾಲಕಿ ದಿತ್ಯಾ ಭಾಂಡೆ ವಿಜೇತರಾಗಿದ್ದಾರೆ.

ಶನಿವಾರ ರಾತ್ರಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಇತರ ಫೈನಲಿಸ್ಟ್‌ಗಳಾದ ದೀಪಾಲಿ,ಮಾಸೂಮ್,ಲಕ್ಷ್ಮಣ್ ಮತ್ತು ಯೋಗೇಶ್ ಅವರನ್ನು ಹಿಂದಿಕ್ಕಿದ ದಿತ್ಯಾ ಗೆಲುವಿನ ನಗುವಿನೊಂದಿಗೆ ಟ್ರೋಫಿಯ ಮೇಲೆ ಆಧಿಪತ್ಯ ಸಾಧಿಸಿದರು.

ಮುಂಬೈನ ನಾಲಾಸೋಪರ ನಿವಾಸಿಯಾಗಿರುವ ದಿತ್ಯಾ ತನ್ನ ಕೆಲವು ಅತ್ಯುತ್ತಮ ಪ್ರದರ್ಶನಗಳಿಂದ ತೀರ್ಪುಗಾರರಾಗಿದ್ದ ಶಿಲ್ಪಾ ಶೆಟ್ಟಿ, ಅನುರಾಗ್ ಬಸು ಮತ್ತು ಗೀತಾ ಕಪೂರ್ ಅವರನ್ನು ಮಂತ್ರಮುಗ್ಧಗೊಳಿಸಿದ್ದರು.

‘‘ಇದು ನನ್ನ ಜೀವನದಲ್ಲಿಯ ಸುವರ್ಣ ಘಳಿಗೆ. ದೇಶದ ಮೊದಲ ‘ಸೂಪರ್ ಡ್ಯಾನ್ಸರ್’ ಎಂಬ ಪ್ರತಿಷ್ಠಿತ ಬಿರುದು ಪಡೆದುಕೊಳ್ಳಲು ನನಗೆ ಅತೀವ ಹರ್ಷವಾಗುತ್ತಿದೆ ’’ಎಂದು ಗೆಲುವಿನ ಬಳಿಕ ದಿತ್ಯಾ ಹೇಳಿದರು.

ಬಾಲಿವುಡ್ ತಾರೆಯರಾದ ಶ್ರದ್ಧಾ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ಅವರೂ ಫಿನಾಲೆಯಲ್ಲಿ ಉಪಸ್ಥಿತರಿದ್ದು, ತಮ್ಮ ಮುಂಬರುವ ಚಿತ್ರ ‘ಒಕೆ ಜಾನು ’ವಿನ ಪ್ರಚಾರವನ್ನು ನಡೆಸಿದರು.

ದಿತ್ಯಾ ಟ್ರೋಫಿಯೊಂದಿಗೆ 15 ಲ.ರೂ.ನಗದು, ಒಂದು ಸ್ಮಾರ್ಟ್ ಫೋನ್ ಮತ್ತು ಪತಂಜಲಿ ಕಂಪನಿಯಿಂದ ಒಂದು ಲಕ್ಷ ರೂ.ವೌಲ್ಯದ ಗಿಫ್ಟ್ ಹ್ಯಾಂಪರ್‌ನ್ನೂ ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News