ಚಹಾ ಮಾರಾಟಗಾರನ ಬಳಿ 400 ಕೋಟಿ ರೂ. ಪತ್ತೆ

Update: 2016-12-19 08:53 GMT

ಸೂರತ್ , ಡಿ.19:  ರಸ್ತೆಯ ಬದಿಯಲ್ಲಿ ಚಹಾ  ಮಾರಾಟ ಮಾಡುವ ಸೂರತ್‌ನ ಕಿಶೋರ್‌ ಬಜಿಯಾವಾಲಾ ಎಂಬವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು   ಶನಿವಾರ ದಾಳಿ ನಡೆಸಿ ಸುಮಾರು 400 ಕೋಟಿ ರೂ. ನಗದು ಮತ್ತು  ಅಪಾರ ಪ್ರಮಾಣದ ಚಿನ್ನಾಭರಣಗಳನ್ನು  ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಸೂರತ್‌ನ ಕಿಶೋರ್‌ ಬಜಿಯಾವಾಲಾ ಅವರ ಮನೆಯ ಮೇಲೆ ದಾಳಿ ನಡೆಸಿದಾಗ 400 ಕೋಟಿ ರೂ. ನಗದು, ಚಿನ್ನಾಭರಣ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿವೆ. 
ಇದೇ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೊಹಾಲಿಯ ಟೈಲರ್‌  ಒಬ್ಬರ ಮನೆಗೆ ದಾಳಿ ನಡೆಸಿ 30 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 18 ಲಕ್ಷ ರೂ. ಹೊಸ ನೋಟುಗಳು  ಸೇರಿವೆ.  ೨.೫ ಕೆ.ಜಿ. ಚಿನ್ನಾಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News