×
Ad

ರಾಷ್ಟ್ರಗೀತೆ ನುಡಿಸುವ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಸಂಸದೆ !

Update: 2016-12-19 15:45 IST

ಹೊಸದಿಲ್ಲಿ, ಡಿ.19: ರಾಷ್ಟ್ರಗೀತೆ ಹಾಡುವ ವೇಳೆ ತೃಣಮೂಲ ಕಾಂಗ್ರೆಸ್ ಸಂಸದೆ ವೈಶಾಲಿ ದಾಲ್ಮೀಯ ಫೋನ್ ಕರೆ ಮಾಡಿ ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೆಂದು ಗುಲ್ಲೆದ್ದಿದೆ. ಹಾವ್ಡಾದಲ್ಲಿ ನಡೆದಿದ್ದ ಒಂದು ಕ್ರೀಡಾಕೂಟದಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಎಲ್ಲರೂ ಸಾಲಾಗಿ ನಿಂತು ಸೆಲ್ಯೂಟ್ ಹೊಡೆಯುತ್ತಿದ್ದರೆ, ಶಾಸಕಿ ವೈಶಾಲಿ ಯಾರೊಂದಿಗೊ ಮೊಬೈಲ್‌ನಲ್ಲಿ ಮಾತಾಡುತ್ತಿದ್ದರು ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸರಕಾರದ ಅಧಿಕಾರಿಗಳು ಕೂಡಾ ಭಾಗವಹಿಸಿದ್ದರು. ರಾಷ್ಟ್ರಗೀತೆಯನ್ನು ಸಿನೆಮಾಗೃಹಗಳಲ್ಲಿ ಹಾಡಬೇಕು ಮತ್ತು ಆಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕೆಂದು ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟುಆದೇಶ ಹೊರಡಿಸಿದೆ.

ಕ್ಯಾಮರಾ ತನ್ನತ್ತ ತಿರುಗಿದ್ದನ್ನು ಕಂಡ ಸಂಸದೆ ಮೊಬೈಲನ್ನು ಆಫ್ ಮಾಡಿ ಜೇಬಿನಲ್ಲಿಟ್ಟಿದ್ದಾರೆ. ಅಷ್ಟರಲ್ಲಿ ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೈಶಾಲಿ ದಾಲ್ಮೀಯ, ಬಿಸಿಸಿಐಯ ಅಧ್ಯಕ್ಷ ಜಗ್ಮೋಹನ್ ದಾಲ್ಮೀಯ ಪುತ್ರಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಸಂಸದೆಯಾಗಿದ್ದಾರೆ. ಈ ಹಿಂದೆ ಈ ರೀತಿ ರಾಷ್ಟ್ರಗೀತೆಯನ್ನು ಅವಮಾನಿಸಿದ ಘಟನೆ ನಡೆದಿದೆ ಎನ್ನಲಾಗಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಮಾತಾಡಿದ್ದರು. ಸಂವಿಧಾನದ ಪ್ರಕಾರ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜವನ್ನು ಅವಮಾನಿಸಿದವರಿಗೆ ಮೂರುವರ್ಷಗಳ ಸಜೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News