ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಿಂದ ಮತದಾರರಿಗೆ ಲಂಚ ಪಡೆಯಲು ಪ್ರಚೋದನೆ !
ಹೊಸದಿಲ್ಲಿ,ಡಿ.19: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರಾವ್‌ಸಾಹೇಬ ದಾನ್ವೆ ಪಾಟೀಲ್ ವಿರುದ್ಧ ಮತದಾರರನ್ನು ಲಂಚ ಪಡೆಯಲು ಪ್ರೇರೇಪಿಸಿದ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ನಿಗಮಗಳಿಗೆ ನಡೆದ ಚುನಾವಣೆ ವೇಳೆ ಔರಂಗಾಬಾದ್‌ನಲ್ಲಿ ಮತದಾರರನ್ನು ದಾನವೆ ವೋಟಿಗಾಗಿ ನೋಟು ಸ್ವೀಕರಿಸುವಂತೆ ಪ್ರರೇಪಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ವಿರೋಧ ಪಕ್ಷಗಳು ಇದು ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಎಂದು ಆರೋಪಿಸುತ್ತಿವೆ ಎಂದು ವರದಿಯಾಗಿದೆ.
ಕಳೆದ ರವಿವಾರ ಮಹಾರಾಷ್ಟ್ರ ನಿಗಮಗಳಿಗೆ ಚುನಾವಣೆ ನಡೆದಿತ್ತು. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ದಾನ್ವೆ "ಇಂದು ಡಿಸೆಂಬರ್ ಹದಿನೇಳು ಆಗಿದೆ. ನಾಳೆ ಡಿಸೆಂಬರ್ ಹದಿನೆಂಟು. ನಿಮಗೆಲ್ಲರಿಗೂ ಮನೆಗೆ ಹೋಗಲು ಬೇಸರವಾಗುತ್ತಿದೆಯೆಂದು ನನಗೆ ಗೊತ್ತು. ಚುನಾವಣೆ ನಡೆಯುವ ಹಿಂದಿನ ದಿವಸದ ಸಂಜೆಯಂತೂ ಬಹಳ ಮಹತ್ವಪೂರ್ಣದ್ದು. ಯಾಕೆಂದರೆ ಅಂದು ನಿಮಗೆ ಅನಿರೀಕ್ಷಿತವಾಗಿ ಲಕ್ಷ್ಮಿಯ ದರ್ಶನವಾಗಲಿದೆ. ಒಂದು ವೇಳೆ ಇಂತಹ ಲಕ್ಷ್ಮೀ ನಿಮ್ಮ ಮನೆಬಾಗಿಲಿಗೆ ಬಂದರೆ ಅದನ್ನು ಸ್ವಾಗತಿಸಿರಿ. ಆದರೆ ವೋಟು ನೀಡುವ ನಿಮ್ಮ ನಿರ್ಧಾರದಲ್ಲಿ ಮಾತ್ರ ಗಟ್ಟಿಯಾಗಿರಿ" ಎಂದು ಹೇಳುತ್ತಿರುವ ದೃಶ್ಯ ವೀಡಿಯೊದಲ್ಲಿದೆ.
ಲಂಚಕ್ಕೆ ಲಕ್ಷ್ಮಿ ಎಂಬ ಪದವನ್ನು ದಾನ್ವೆ ಬಳಸಿದ್ದಾರೆ ಎನ್ನಲಾಗಿದ್ದು, ಪೈಟನ್‌ನಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜಾ ಮುಂಢೆ ಭಾಗವಹಿಸಿದ್ದರು. ಈ ಹಿಂದೆಯೂ ದಾನ್ವೆ ವಿವಾದದ ಕೇಂದ್ರ ಬಿಂದುವಾಗಿದ್ದರು. ಕಳೆದ ನವೆಂಬರ್ 25ರ ಜಲಗಾಂವ್‌ನ ಅವರ ಚುನಾವಣಾ ಪ್ರಚಾರ ಭಾಷಣ ಕೂಡಾ ವಿವಾದಾಸ್ಪದವಾಗಿತ್ತು ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.