×
Ad

ಸೈಬೀರಿಯ: ಮದ್ಯವೆಂದು ಸ್ನಾನದೆಣ್ಣೆಯನ್ನು ಸೇವಿಸಿ 25 ಸಾವು

Update: 2016-12-19 20:16 IST

ಮಾಸ್ಕೊ, ಡಿ. 19: ಸೈಬೀರಿಯದ ನಗರ ಇರ್ಕ್‌ಟಸ್ಕ್ ನಗರದಲ್ಲಿ, ಆಲ್ಕೊಹಾಲ್‌ನಷ್ಟೆ ನಶೆಯನ್ನು ಉಂಟು ಮಾಡುತ್ತದೆ ಎಂದು ಭಾವಿಸಿ ಸ್ನಾನದ ಎಣ್ಣೆ ಯನ್ನು ಸೇವಿಸಿದವರ ಪೈಕಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ ಎಂದು ರಶ್ಯ ಪೊಲೀಸರು ಸೋಮವಾರ ಹೇಳಿದ್ದಾರೆ.

ರಶ್ಯದ ಹಲವು ಭಾಗಗಳಲ್ಲಿ ದುಬಾರಿ ಆಲ್ಕೊಹಾಲ್‌ಗೆ ಪರ್ಯಾಯವಾಗಿ ಇತರ ವಸ್ತುಗಳನ್ನು ಸೇವಿಸುವ ಪ್ರವೃತ್ತಿ ಚಾಲ್ತಿಯಲ್ಲಿದೆ. ಎರಡು ವರ್ಷಗಳ ಆರ್ಥಿಕ ಬಿಕ್ಕಟ್ಟು ಇಲ್ಲಿ ಹೆಚ್ಚಿನ ಜನರನ್ನು ಬಡತನ ರೇಖೆಗಿಂತ ಕೆಳಗೆ ದೂಡಿದೆ.

ಸ್ನಾನದೆಣ್ಣೆಯನ್ನು ಪೂರೈಸಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News