×
Ad

ಪ್ರತಿ ದಿನ 5-6 ಮಂದಿಯನ್ನು ಕೊಲ್ಲುವ ಡುಟರ್ಟ್ ಯೋಜನೆಗೆ ಚರ್ಚ್ ವಿರೋಧ

Update: 2016-12-19 20:24 IST

ಮನಿಲ (ಫಿಲಿಪ್ಪೀನ್ಸ್), ಡಿ. 19: ಮರಣ ದಂಡನೆಯನ್ನು ಮತ್ತೆ ಜಾರಿಗೆ ತಂದು, ಪ್ರತಿ ದಿನ ‘ಐದರಿಂದ ಆರು ಕ್ರಿಮಿನಲ್’ಗಳನ್ನು ಗಲ್ಲಿಗೇರಿಸುವ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್‌ರ ಯೋಜನೆಯನ್ನು ದೇಶದ ಕ್ಯಾತೊಲಿಕ್ ನಾಯಕರು ಮತ್ತು ಮಾನವಹಕ್ಕು ಗುಂಪುಗಳು ಸೋಮವಾರ ಖಂಡಿಸಿವೆ.


ಅಪರಾಧಿಗಳ ವಿರುದ್ಧ ಸಮರ ಸಾರಿರುವ ಡುಟರ್ಟ್, ದೇಶದಲ್ಲಿ ಮರಣ ದಂಡನೆಯನ್ನು ಮತ್ತೆ ಜಾರಿಗೆ ತರುವುದನ್ನು ತನ್ನ ಶಾಸನಾತ್ಮಕ ಆದ್ಯತೆಯನ್ನಾಗಿಸಿದ್ದಾರೆ. ‘ಅಪರಾಧಿಗಳ ವಿರುದ್ಧದ’ ಸಮರದಲ್ಲಿ ಈಗಾಗಲೇ ದೇಶದಲ್ಲಿ 5,300ಕ್ಕೂ ಅಧಿಕ ಮಂದಿ ಕೊಲೆಯಾಗಿದ್ದಾರೆ.


‘‘ಈ ಹಿಂದೆ ಮರಣ ದಂಡನೆ ಜಾರಿಯಲ್ಲಿತ್ತು .ಆದರೆ, ಏನೂ ಆಗಲಿಲ್ಲ. ಅದನ್ನು ನನಗೆ ಮರಳಿಸಿ. ಐದಾರು ಕ್ರಿಮಿನಲ್‌ಗಳನ್ನು ನಾನು ಪ್ರತಿ ದಿನ ಕೊಲ್ಲುತ್ತೇನೆ. ಇದು ಸತ್ಯ’’ ಎಂದು ಡುಟರ್ಟ್ ಶನಿವಾರ ಹೇಳಿದ್ದರು.


ಡುಟರ್ಟ್‌ರ ಯೋಜನೆಗೆ ಚರ್ಚ್ ‘ಸಂಪೂರ್ಣ ವಿರುದ್ಧವಾಗಿದೆ’ ಎಂದು ಫಿಲಿಪ್ಪೀನ್ಸ್‌ನ ಪ್ರಭಾವಿ ‘ಕ್ಯಾತೊಲಿಕ್ ಬಿಶಪ್ಸ್ ಕಾನ್ಫರೆನ್ಸ್’ನ ಅಧಿಕಾರಿಯೊಬ್ಬರು ಹೇಳಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News