×
Ad

ಸೈಫ್‌-ಕರೀನಾಗೆ ಮೊದಲ ಮಗು

Update: 2016-12-20 11:40 IST

ಮುಂಬೈ, ಡಿ.20:ಸೈಫ್‌ ಅಲಿ ಖಾನ್ ಮತ್ತು ಕರೀನಾ ಕಪೂರ್‌ ಖಾನ್‌ಗೆ ಮೊದಲ ಮಗುವಾಗಿದೆ.

ಮಂಗಳವಾರ ಬೆಳಗ್ಗೆ ಬೆಳಗ್ಗೆ 7.30ರ ಹೊತ್ತಿಗೆ ಕರೀನಾ ಕಪೂರ್‌  ಬ್ರೀಜ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ. ಮಗುವಿಗೆ ತೈಮೂರ್‌ ಅಲಿ ಖಾನ್‌ ಪಟೌಡಿ ಎಂದು ಹೆಸರಿಡಲು ನಿರ್ಧರಿಸಲಾಗಿದೆ  ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಸೈಫ್‌ ಮತ್ತು ಕರೀನಾ ವಿವಾಹ ಅ.16, 2012ರಲ್ಲಿ ನಡೆದಿತ್ತು.

ಸೈಫ್ ಅಲಿ ಖಾನ್‌ ಅವರದ್ದು ಪ್ರತಿಷ್ಠಿತ ರಾಜವಂಶಕ್ಕೆ ಸೇರಿದ  ಕುಟುಂಬ. ಈ ಕಾರಣದಿಂದಾಗಿ  ಮಗುವಿಗೆ  "ತೈಮೂರ್‌ ಅಲಿ ಖಾನ್‌' ಎಂದು ಹೆಸರನ್ನು ಇಡಲಾಗಿದೆ.
ಸೈಫ್ ಅಲಿ ಖಾನ್‌ ಮೊದಲು  ತನಗಿಂತ ಹನ್ನೆರಡು ವರ್ಷ ಹಿರಿಯಳಾದ ಬಾಲಿವುಡ್‌ ನಟಿ ಅಮೃತಾ ಸಿಂಗ್‌  ಅವರನ್ನು 1991ರಲ್ಲಿ ವಿವಾಹವಾಗಿದ್ದರು. ಅವರ ಮೂಲಕ ಇಬ್ರಾಹಿಂ ಅಲಿ ಖಾನ್‌ ಮತ್ತು ಸಾರಾ ಅಲಿ ಖಾನ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದರು.ಆದರೆ 2012ರಲ್ಲಿ ಅಮೃತಾ ಸಿಂಗ್‌ಗೆ ಸೈಫ್ ಅಲಿ ಖಾನ್‌ ಡೈವೋರ್ಸ್‌ ನೀಡಿದ್ದರು.ಬಳಿಕ ಸೈಫ್ ಅಲಿ ಖಾನ್‌ ಅವರು ಕರೀನಾ ಕಪೂರ್‌ರನ್ನು ವಿವಾಹವಾಗಿದ್ದರು

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News