×
Ad

ಕರ್ನಾಟಕ ಭಾರತದ ಭಾಗ ಎಂದು ಸ್ಮೃತಿಗೆ ನೆನಪಿಸಿದ ಸಿಟಿ ರವಿ !

Update: 2016-12-20 15:46 IST

ಹೊಸದಿಲ್ಲಿ,ಡಿ.20: ಬಿಜೆಪಿ ಶಾಸಕ ಸಿ.ಟಿ.ರವಿ ಅವರು ‘‘ಕರ್ನಾಟಕವೂ ಭಾರತದ ಭಾಗವಾಗಿದೆ ’’ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರಿಗೆ ನೆನಪಿಸಿದ್ದಾರೆ. ಹಿಂದೊಮ್ಮೆ ಮಹಾ ಸಿಡುಕು ಸ್ವಭಾವದವರಾಗಿದ್ದು, ಈಗ ಕೊಂಚ ತಗ್ಗಿರುವ ಸ್ಮೃತಿ ರವಿಯವರ ಟ್ವಿಟರ್ ಬಾಣವನ್ನು ಸಮಾಧಾನದಿಂದಲೇ ಸ್ವೀಕರಿಸಿದ್ದಾರೆ.

ನೇಕಾರರಿಗೆ ನೂಲು ಖರೀದಿಯ ಬಗ್ಗೆ ಮಾಹಿತಿ ಸುಲಭವಾಗಿ ಸಿಗುವಂತಾಗಲು ಜವಳಿ ಸಚಿವಾಲಯವು ಸೋಮವಾರ ‘ಇ ಧಾಗಾ’ ಆ್ಯಪ್‌ನ್ನು ಬಿಡುಗಡೆಗೊಳಿಸಿದೆ. ಪ್ರಾಥಮಿಕ ಹಂತದಲ್ಲಿ ಈ ಆ್ಯಪ್‌ನ್ನು ಹಿಂದಿ,ಇಂಗ್ಲೀಷ್ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಇ ಧಾಗಾ ಶೀಘ್ರವೇ ತಮಿಳು,ಬಂಗಾಲಿ,ಒರಿಯಾ,ಉರ್ದು ಮತ್ತು ಅಸ್ಸಾಮಿ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಸ್ಮೃತಿ ಈ ಸಂದರ್ಭದಲ್ಲಿ ತಿಳಿಸಿದರು. ಆದರೆ ಕನ್ನಡ ಭಾಷೆಯ ಉಲ್ಲೇಖವೇ ಇರಲಿಲ್ಲ.

ಹೀಗಾಗಿ ರವಿ ‘ಮೇಡಂ,ಕರ್ನಾಟಕವೂ ಭಾರತದ ಭಾಗವಾಗಿದೆ ’ಎಂದು ನೆನಪಿಸಿ ಟ್ವಿಟರ್ ಬಾಣ ಬಿಟ್ಟಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News