ಮಹಿಳೆಯರ ನಡುವೆ ಜಗಳ: 15ನೆ ಮಹಡಿಯಿಂದ 5ವರ್ಷದ ಮಗುವನ್ನು ಕೆಳಗೆಸೆದ ಮಹಿಳೆ !
Update: 2016-12-20 17:04 IST
ಮುಂಬೈ,ಡಿ.20: ಮಹಿಳೆಯೊಬ್ಬರು ಐದುವರ್ಷದ ಹೆಣ್ಣುಮಗುವನ್ನು 15ನೆ ಮಹಡಿಯಿಂದ ಕೆಳಗೆಸದಿದ್ದಾರೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಧ್ಯಮುಂಬೈಯ ಬೈಕುಲ್ಲಾದಲ್ಲಿ ಸೋಮವಾರ ಮಧ್ಯಾಹ್ನ 12:30ಕ್ಕೆ ಈ ದುರ್ಘಟನೆ ನಡೆದಿದೆ. ಬೈಕುಲ್ಲಾದ ವಿಘ್ನಹಾರ್ತದ ಕಟ್ಟಡದ ಮಹಡಿಯಿಂದ ಮಗುವನ್ನು ಕೆಳಗೆಸೆಯಲಾಗಿದೆ. ನೆರೆಯ ಮಹಿಳೆ ಹಾಗೂ ಮಗುವಿನ ತಾಯಿಯ ನಡುವೆ ಜಗಳ ನಡೆದಿದ್ದು, ಆ ನೆರೆಯ ಆರೋಪಿ ಮಹಿಳೆ ಬಾಲ್ಕನಿಯಿಂದ ಹೆಣ್ಣು ಮಗುವನ್ನು ಕೆಳಗೆಸೆದಳೆಂದು ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ತಕ್ಷಣ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದರು. ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ಈವರೆಗೂ ಆರೋಪಿ ಮಹಿಳೆಯನ್ನು ಬಂಧಿಸಲಾಗಿಲ್ಲ ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.