ಜನರನ್ನು ಬೆದರಿಸಿ ಪೊಲೀಸರ ಮನೋಬಲ ಉಳಿಸಬೇಕಾಗಿಲ್ಲ: ವಿ.ಎಸ್. ಅಚ್ಯುತಾನಂದನ್
ತಿರುವನಂತಪುರಂ,ಡಿ.20: ಪೊಲೀಸರ ಮನೋಸ್ಥೈರ್ಯ ರಕ್ಷಿಸುವುದಕ್ಕೆ ಜನರನ್ನು ಬೆದರಿಸುವ ಕೆಲಸ ಆಗಬಾರದೆಂದು ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆ. ಅಂತಹ ಅಧಿಕಾರಿಗಳಿಂದ ಸರಕಾರಕ್ಕೆ ಫ್ಯಾಶಿಸ್ಟ್ ಎಂದು ಕೆಟ್ಟಹೆಸರು ಬರುತ್ತದೆ. ಇಂತಹವರನ್ನು ಮಟ್ಟಹಾಕುವುದರ ಮೂಲಕ ಪೊಲೀಸ್ ಇಲಾಖೆಯ ಮನೋಸ್ಥೈರ್ಯವನ್ನು ಹೆಚ್ಚಿಸಲು ಸಾಧ್ಯವಿದೆ ಎಂದಿದ್ದಾರೆ. ಫ್ಯಾಶಿಸ್ಟ್ ಸರಕಾರದ ದೌರ್ಜನ್ಯ ಕೇರಳದಲ್ಲಿ ನಡೆಯದು ಎಂದು ಪೊಲೀಸರು ತಿಳಿದಿರಬೇಕು. ಪ್ರಸಕ್ತ ಇಲ್ಲಿ ಎಡಪಕ್ಷಗಳ ಆಡಳಿತವಿದ್ದು, ಪೊಲೀಸ್ ದೌರ್ಜನ್ಯ ವೆಂಬುದು ಮುಗಿದ ಅಧ್ಯಾಯವೆಂದು ಅಚ್ಯುತಾನಂದನ್ ಗುಡುಗಿದ್ದಾರೆ.
ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೊಲೀಸರ ಸ್ಥೈರ್ಯ ಕೆಡಿಸುವುದನ್ನು ಸರಕಾರ ಮಾಡುವುದಿಲ್ಲ ಎಂದಿದ್ದರು. ಅದಕ್ಕೆ ಅಚ್ಯುತಾನಂದನ್ ಈರೀತಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಸಿಪಿಎಂ ಶಾಖಾ ಕಾಯಕರ್ತಮತ್ತು ಗೆಳಯನ ಕುಟುಂಬದ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯನ್ನು ಉದ್ಧರಿಸಿದ ಅಚ್ಯುತಾನಂದನ್ ಪೊಲೀಸರು ಹದ್ದು ಮೀರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಕೇರಳವೆಂದರೆ ಸ್ವತಂತ್ರ ಮತ್ತು ನಿರ್ಭಿತಿಯಿಂದ ದಲಿತರು, ಆದಿವಾಸಿಗಳು, ಸಾಹಿತಿಗಳು, ಕಲಾವಿದರು ಬದುಕುವ ಪ್ರದೇಶ. ಇಲ್ಲಿನ ಸಾಹಿತಿಗಳಿಗೆ ಕಲಬುರ್ಗಿ, ಫನ್ಸಾರೆಯ ಗತಿಯಾಗುವುದಿಲ್ಲ ಎಂದು ದೃಢಪಡಿಸಲಿಕ್ಕಾಗಿ ಪೊಲೀಸರು ನೇಮಕಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಸಿಪಿಎಂ ಶಾಖಾ ಕಾರ್ಯದರ್ಶಿ ಕುಟುಂಬ ಮತ್ತು ಗೆಳೆಯನ ಕುಟುಂಬ ಸದಸ್ಯರಿಗೆ ಕೇರಳ ಬೀಚ್‌ವೊಂದರಲ್ಲಿ ಪೊಲೀಸ್ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಅಚ್ಯುತಾನಂದನ್ ಈ ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆಯತ್ನ ಆರೋಪ ಹೊರಿಸಿ ಕೇಸು ದಾಖಲಿಸಬೇಕೆಂದು ಹೇಳಿದ್ದಾರೆ. "ಕೇವಳ ಒಂದೂವರೆವರ್ಷದ ಮಗುವಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಪೊಲೀಸ್ ಅಧಿಕಾರಿಗಳು ಕೇರಳಕ್ಕೆ ಬೇಕಿಲ್ಲ. ಕಮಲ್‌ಸಿ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಹೇಳನ ನಡೆಸಿದ್ದಾರೆಂದು ಬಂಧಿಸಿ ಅವರ ಬೆನ್ನೆಲು ಮುರಿಯುವ ಬೆದರಿಕೆಯೊಡ್ಡಿದ್ದಾರೆಂದು ಸುದ್ದಿ ಪ್ರಕಟವಾಗಿದೆ. ಯುವಮೋರ್ಚದ ಕಾರ್ಯಕರ್ತ ಡಿಜಿಪಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮತೆಗೆದುಕೊಂಡರು ಎನ್ನಲಾಗುತ್ತಿದೆ. ಸುದ್ದಿ ಸತ್ಯವೆಂದಾದರೆ ವಿಷಯ ತುಂಬ ಗಂಭೀರವಾಗಿದೆ" ಎಂದು ಅಚ್ಯುತಾನಂದನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.