×
Ad

ಕಪ್ಪು ಹಣ ಬೇಟೆ: ಬಿಜೆಪಿ ನಾಯಕನ ಮನೆ-ಕಚೇರಿಗಳಿಗೆ ಐಟಿ ದಾಳಿ

Update: 2016-12-20 19:47 IST

ಭೋಪಾಲ್, ಡಿ.20: ಆದಾಯ ತೆರಿಗೆ ಅಧಿಕಾರಿಗಳಿಂದು ಬಿಜೆಪಿ ಸ್ಥಳೀಯ ನಾಯಕ ಸುಶೀಲ್ ವಾಸ್ವಾನಿ ಎಂಬವರ ಇಲ್ಲಿನ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ್ದಾರೆ.

ಭೋಪಾಲದ ಉಪನಗರ ಭೈರಗಡದಲ್ಲಿರುವ ವಾಸ್ವಾನಿಯವರ ನಿವಾಸದಿಂದ ಇಂದು ಮುಂಜಾನೆ ಶೋಧಕಾರ್ಯ ಆರಂಭವಾಗಿತ್ತು. ಬಳಿಕ ಅದು ವಾಸ್ವಾನಿ ಹಾಗೂ ಅವರ ಕುಟುಂಬ ನಡೆಸುತ್ತಿದ್ದ ಹೊಟೇಲ್‌ಗಳು ಹಾಗೂ ಒಂದು ಸಹಕಾರಿ ಬ್ಯಾಂಕ್ ಸಹಿತ ಇತರ ಆವರಣಗಳಲ್ಲಿ ಮುಂದುವರಿಯಿತೆಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲವಾದರೂ ಈ ದಾಳಿಗಳು ನೋಟು ನಿಷೇಧದ ಬಳಿಕ ನಡೆಯುತ್ತಿರುವ ಕಪ್ಪುಹಣ ಬೇಟೆಯ ಭಾಗವಾಗಿದೆಯೆಂದು ನಂಬಲಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News