×
Ad

ಸ್ಟಾರ್ ಡಸ್ಟ್ ಪ್ರಶಸ್ತಿ ಪ್ರದಾನ

Update: 2016-12-20 20:00 IST

ಮುಂಬೈ,ಡಿ. 20 :  ಸುಲ್ತಾನ್ ,  ಪಿಂಕ್ ಹಾಗು ಅಯ್ ದಿಲ್ ಹೈ ಮುಷ್ಕಿಲ್ ಚಿತ್ರಗಳು ಸ್ಟಾರ್ ಡಸ್ಟ್ ಪ್ರಶಸ್ತಿಗಳಲ್ಲಿ ಸಿಂಹ ಪಾಲು ಪಡೆದಿವೆ.

ಶ್ರೇಷ್ಠ ಚಿತ್ರ ವಿಭಾಗದಲ್ಲಿ ಪಿಂಕ್ ಚಿತ್ರವನ್ನು ಸೋಲಿಸಿ ಸುಲ್ತಾನ್ ಪ್ರಶಸ್ತಿ ಗೆದ್ದುಕೊಂಡಿದೆ. 

ಪಿಂಕ್ ಚಿತ್ರದ ನಟನೆಗಾಗಿ ಅಮಿತಾಭ್ ಬಚ್ಚನ್ ಶ್ರೇಷ್ಠ ನಟ ಹಾಗು ಸುಲ್ತಾನ್ ಹಾಗು ಅಯ್ ದಿಲ್ ಹೈ ಮುಷ್ಕಿಲ್ ಚಿತ್ರಗಳಲ್ಲಿ ನಟಿಸಿದ ಅನುಷ್ಕಾ ಶರ್ಮ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾದರು.

ನೀರ್ಜಾ ದಲ್ಲಿನ ಅಮೋಘ ನಟನೆಗಾಗಿ ಸೋನಂ ಕಪೂರ್ ಹಾಗು  ಫ್ಯಾನ್ ಚಿತ್ರದ ದ್ವಿಪಾತ್ರಕ್ಕಾಗಿ ಶಾರುಖ್ ಖಾನ್ ಸಂಪಾದಕರ ಆಯ್ಕೆಯ ಶ್ರೇಷ್ಠ ನಟಿ, ಶ್ರೇಷ್ಠ ನಟ ಪ್ರಶಸ್ತಿ ಪಡೆದರು. 

ಅಯ್ ದಿಲ್ ಹೈ ಮುಷ್ಕಿಲ್ ಚಿತ್ರದ ನಿರ್ದೇಶಕ ಕರಣ್ ಜೋಹರ್ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದರು. 

ತಾಂತ್ರಿಕ ವಿಭಾಗಗಳಲ್ಲೂ ಸುಲ್ತಾನ್ , ಅಯ್ ದಿಲ್ ಹೈ ಮುಷ್ಕಿಲ್, ನೀರ್ಜಾ ಹಾಗು ಕಪೂರ್ ಅಂಡ್ ಸನ್ಸ್ ಹಲವು ಪ್ರಶಸ್ತಿಗಳಿಗೆ ಪಾತ್ರವಾದವು. 

ಸರಬ್ಜಿತ್ ಚಿತ್ರದ ನಟನೆಗಾಗಿ ಐಶ್ವರ್ಯ ರೈ ಅವರು ವರ್ಷದ ಐಕಾನಿಕ್ ನಟನೆ ಪ್ರಶಸ್ತಿಯ ಗೌರವ ಪಡೆದರು.

ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಅವರು ವರ್ಷದ ಗ್ಲೋಬಲ್ ಐಕನ್ ಪುರಸ್ಕಾರ ಪಡೆದರು.

 
ಚಿರಯುವತಿ ರೇಖಾ ಅವರನ್ನು ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯುವ ಸ್ಟಾರ್ ರೋಹಿತ್ ಧವನ್ ಅವರಿಗೆ ಬೆಸ್ಟ್ ಸೂಪರ್ ಸ್ಟಾರ್ ನೆಕ್ಸ್ಟ್ ಜೆನ್ ಅವಾರ್ಡ್ ನೀಡಲಾಯಿತು. ನೀರ್ಜಾದ ಖಳ ಪಾತ್ರಕ್ಕಾಗಿ ಜಿಮ್ ಸರಭ್ ಶ್ರೇಷ್ಠ ಖಳ ಪ್ರಶಸ್ತಿ ಪಡೆದರು. 

ಕಪೂರ್ ಎಂಡ್ ಸನ್ಸ್ ಗಾಗಿ ರಿಷಿ ಕಪೂರ್ ಹಾಗು ನೀರ್ಜಾ ಚಿತ್ರಕ್ಕಾಗಿ ಶಬನಾ ಆಜ್ಮಿ ಶ್ರೇಷ್ಠ ಸಹ ನಟ , ನಟಿ ಪ್ರಶಸ್ತಿ ಪಡೆದರು. 


ಮಿರ್ಝಿಯ ಚಿತ್ರದ ಹರ್ಷವರ್ಧನ್ ಕಪೂರ್ ಹಾಗು ಸಯ್ಯಾಮಿ ಖೇರ್ ಅವರು ಶ್ರೇಷ್ಠ ಹೊಸ ನಟ , ನಟಿ ಪ್ರಶಸ್ತಿ ಪಡೆದರು.

ಶ್ರೇಷ್ಠ ಹೊಸ ನಟಿ ಪ್ರಶಸ್ತಿಯನ್ನು ಎಂ ಎಸ್ ಧೋನಿ ಚಿತ್ರದ ನಟಿ ದಿಶಾ ಪಟಾನಿ ಅವರು ಸಯ್ಯಾಮಿ ಜೊತೆ ಹಂಚಿಕೊಂಡರು.  


ಶ್ರೇಷ್ಠ ಸಂಗೀತ ವಿಭಾಗದಲ್ಲಿ ಅಯ್ ದಿಲ್ ಹೈ ಮುಷ್ಕಿಲ್ ಚಾಂಪಿಯನ್ ಆಯಿತು.

ಈ ಚಿತ್ರಕ್ಕಾಗಿ ಪ್ರೀತಮ್ ಗೆ ಶ್ರೇಷ್ಠ ಸಂಗೀತ ನಿರ್ದೇಶಕ, ಅಮಿತಾಭ್ ಭಟ್ಟಾಚಾರ್ಯ ಶ್ರೇಷ್ಠ ಸಾಹಿತಿ ಹಾಗು ಅರಿಜಿತ್ ಸಿಂಗ್ ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದರು. 

ಶಿವಾಯ್ ಚಿತ್ರಕ್ಕಾಗಿ ಅಜಯ್ ದೇವ್ಗನ್ ಅವರಿಗೆ ವಿಶೇಷ ನಿರ್ದೇಶನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News