×
Ad

ಹೊಸನೋಟುಗಳ ಮುದ್ರಣಕ್ಕೆ ಆರ್‌ಬಿಐ ಎಷ್ಟು ತೆರುತ್ತಿದೆ..ಗೊತ್ತೇ?

Update: 2016-12-20 20:27 IST

ಇಂದೋರ,ಡಿ.20: ನೋಟು ರದ್ದತಿಯ ಬಳಿಕ ಹೊಸ 500 ಮತ್ತು 2,000 ರೂ.ಗಳ ಮುದ್ರಣಕ್ಕೆ ಎಷ್ಟು ವೆಚ್ಚ ತಗುಲುತ್ತದೆ ಎನ್ನುವುದು ಗೊತ್ತೇ? ಭಾರತೀಯ ರಿಜರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿ.(ಬಿಆರ್‌ಬಿಎನ್‌ಎಂಪಿಎಲ್) ಪ್ರತಿ 500 ರೂ.ನೋಟಿಗೆ 3.09 ರೂ. ಮತ್ತು ಪ್ರತಿ 2,000 ರೂ.ನೋಟಿಗೆ 3.54 ರೂ.ಮುದ್ರಣ ವೆಚ್ಚವನ್ನು ವಿಧಿಸುತ್ತಿದೆ. ಬಿಆರ್‌ಬಿಎನ್‌ಎಂಪಿಎಲ್ ಆರ್‌ಬಿಐನ ಅಂಗಸಂಸ್ಥೆಯಾಗಿದೆ.

ನೀಮಚ್‌ನ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ ಗೌಡ್ ಅವರ ಅರ್ಜಿಗೆ ಉತ್ತರಿಸಿರುವ ಬಿಆರ್‌ಬಿಎನ್‌ಎಂಪಿಎಲ್, 5,00 ರೂ.ಗಳ ಪ್ರತಿ 1,000ನೋಟುಗಳ ಮುದ್ರಣಕ್ಕೆ 3,090 ರೂ. ಮತ್ತು 2,000 ರೂ.ಗಳ ಪ್ರತಿ 1,000 ನೋಟುಗಳಿಗೆ 3,450 ರೂ.ಶುಲ್ಕವನ್ನು ವಿಧಿಸುತ್ತಿರುವುದಾಗಿ ತಿಳಿಸಿದೆ. ಪ್ರತಿ ಸಾವಿರಕ್ಕೆ ಹಳೆಯ 500 ರೂ.ನೋಟುಗಳಿಗೆ 3,090 ರೂ. ಮತ್ತು 1,000 ರೂ.ನೋಟುಗಳಿಗೆ 3,450 ರೂ.ಮುದ್ರಣ ವೆಚ್ಚವಾಗಿತ್ತು. ಹೀಗಾಗಿ ಹಾಲಿ ಮತ್ತು ಹಿಂದಿನ ವೆಚ್ಚಗಳಲ್ಲಿ ವ್ಯತ್ಯಾಸವಿಲ್ಲ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News