ನೋಟು ರದ್ದತಿ: 3,185 ಕೋ.ರೂ.ಅಘೋಷಿತ ಆದಾಯ ಪತ್ತೆ, 86ಕೋ.ರೂ.ಹೊಸನೋಟು ವಶ
ಹೊಸದಿಲ್ಲಿ.ಡಿ.20: ನ.8ರಂದು 500 ಮತ್ತು 1,000 ರೂ.ನೋಟುಗಳನ್ನು ರದ್ದುಗೊಳಿಸಿದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ದೇಶಾದ್ಯಂತ ನಡೆಸಿದ 677 ಶೋಧ ಕಾರ್ಯಾಚರಣೆಗಳಲ್ಲಿ ಡಿ.19ರವರೆಗೆ 3,185 ಕೋ.ರೂ.ಗಳ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿದ್ದಾರೆ ಮತ್ತು 86 ಕೋ.ರೂ.ಮೌಲ್ಯದ ಹೊಸನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರ ಆರೋಪಗಳಲ್ಲಿ ವಿವಿಧ ಸಂಸ್ಥೆಗಳಿಗೆ 3,100ಕ್ಕೂ ಅಧಿಕ ನೋಟಿಸುಗಳನ್ನು ಜಾರಿ ಗೊಳಿಸಲಾಗಿದೆ.
ಇದೇ ಅವಧಿಯಲ್ಲಿ 428 ಕೋ.ರೂ.ಗೂ ಅಧಿಕ ಮೌಲ್ಯದ ನಗದುಹಣ ಮತ್ತು ಚಿನ್ನಾಭರಣಗಳನ್ನು ಆದಾಯ ತೆರಿಗೆ ಇಲಾಖೆಯು ವಶಪಡಿಸಿಕೊಂಡಿದೆ. ವಶಪಡಿಸಿ ಕೊಳ್ಳಲಾಗಿರುವ 86 ಕೋ.ರೂ.ಗಳ ಹೊಸನೋಟುಗಳಲ್ಲಿ 2,000 ರೂ.ನೋಟುಗಳು ಹೆಚ್ಚಿನ ಪ್ರಮಾಣದಲ್ಲಿವೆ.
ಇಲಾಖೆಯು ಹಣ ಚೆಲುವೆ,ಅಕ್ರಮ ಸಂಪತ್ತು ಮತ್ತು ಭ್ರಷ್ಟಾಚಾರದಂತಹ ಇತರ ಅಪರಾಧಗಳ ತನಿಖೆಗಾಗಿ 220 ಕ್ಕೂ ಅಧಿಕ ಪ್ರಕರಣಗಳನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.