‘ಸ್ವಚ್ಛ’ ಮುಂಬೈಗಾಗಿ ನಟ ಸಲ್ಮಾನ್‌ರಿಂದ ಮೊಬೈಲ್ ಟಾಯ್ಲೆಟ್‌ಗಳ ಕೊಡುಗೆ

Update: 2016-12-21 09:25 GMT

ಮುಂಬೈ,ಡಿ.21: ಮುಂಬೈ ಮಹಾನಗರದಲ್ಲಿ ಬಯಲು ಶೌಚ ಮತ್ತು ತ್ಯಾಜ್ಯದ ವಿರುದ್ಧ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಅಭಿಯಾನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಂಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸ್ವಚ್ಛ ಮುಂಬೈಗಾಗಿ ಐದು ಸಂಚಾರಿ ಶೌಚಾಲಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ಶೌಚಾಲಯವು ಆರು ಆಸನಗಳನ್ನು ಹೊಂದಿದೆ.

 ಬಿಎಂಸಿ ಮುಖ್ಯಸ್ಥ ಅಜಯ್ ಮೆಹ್ತಾ ಮತ್ತು ಯುವಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರನ್ನು ಭೇಟಿಯಾದ ಸಲ್ಮಾನ್ ತನ್ನ ಕೊಡುಗೆಯನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮತ್ತು ಬಯಲು ಶೌಚದ ಬದಲು ಶೌಚಾಲಯಗಳನ್ನು ಬಳಸುವಂತೆ ಸಾರ್ವಜನಿಕರನ್ನು ಆಗ್ರಹಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News