ಚಿಕ್ಕಿ ಹಗರಣ:ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಢೆಗೆ ಕ್ಲೀನ್ ಚಿಟ್
ಮುಂಬೈ,ಡಿ.21: ರಾಜ್ಯ ಮಹಿಳಾ ಮತ್ತು ಶಿಶು ಕಲ್ಯಾಣ ಸಚಿವೆ ಪಂಕಜಾ ಮುಂಧೆ ವಿರುದ್ಧದ ಚಿಕ್ಕಿ ಹಗರಣ ಪ್ರಕರಣವನ್ನು ಮುಚ್ಚುವಂತೆ ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಸರಕಾರಕ್ಕೆ ಶಿಫಾರಸು ಮಾಡಿದೆ. ಶಾಲಾಮಕ್ಕಳಿಗಾಗಿ ಪೌಷ್ಟಿಕಾಂಶ ಆಹಾರ ಸೇರಿದಂತೆ ಅಗತ್ಯವಸ್ತುಗಳ ಪೂರೈಕೆಗಾಗಿ 206 ಕೋ.ರೂ.ಗಳ ಗುತ್ತಿಗೆಗಳ ನೀಡಿಕೆಯಲ್ಲಿ ಅವ್ಯವಹಾರಗಳನ್ನು ನಡೆಸಿದ ಆರೋಪವನ್ನು ಮುಂಧೆ ಎದುರಿಸುತ್ತಿದ್ದರು.
ಮುಂಧೆಯವರ ಆದೇಶದ ಮೇರೆಗೆ ಅವರ ಸಚಿವಾಲಯವು ಕಳೆದ ಫೆಬ್ರುವರಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕೆಲವು ನಿರ್ದಿಷ್ಟ ಕಂಪನಿಗಳಿಗೆ ಈ ಗುತ್ತಿಗೆಗಳನ್ನು ನೀಡಿದೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು ದೂರು ಸಲ್ಲಿಸಿದ್ದರು. ತನ್ನ ವಿರುದ್ಧದ ಆರೋಪವನ್ನು ಮುಂಧೆ ನಿರಾಕರಿಸಿದ್ದರು.
ಈ ಗುತ್ತಿಗೆಗಳ ಪೈಕಿ ಚಿಕ್ಕಿಗಳ ಪೂರೈಕೆಗಾಗಿ 113 ಕೋ.ರೂ.ಗಳ ಗುತ್ತಿಗೆಯನ್ನು ಸೂರ್ಯಕಾಂತಾ ಮಹಿಳಾ ಔದ್ಯೋಗಿಕ ಸಂಸ್ಥಾಕ್ಕ್ಕೆ ನೀಡಲಾಗಿತ್ತು. ಕಂಪನಿಯು ಪ್ರತಿ ಕೆ.ಜಿ.ಚಿಕ್ಕಿಗೆ 285 ರೂ.ದರವನ್ನು ಉಲ್ಲೇಖಿಸಿದ್ದರೆ ಇತರ ಕಂಪನಿಗಳು ಕೆ.ಜಿ.ಗೆ ಕೇವಲ 127 ರೂ.ಉಲ್ಲೇಖಿಸಿದ್ದವು. ಹೀಗಾಗಿ ಇದು ಚಿಕ್ಕಿ ಹಗರಣವೆಂದು ಹೆಸರು ಪಡೆದು ಕೊಂಡಿತ್ತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.