×
Ad

ಕವಿತೆಯ ಪೋಸ್ಟರ್ ಅಂಟಿಸಿದ್ದಕ್ಕೆ ಎರ್ನಾಕುಲಂ ಮಹಾರಾಜಾಸ್‌ನ 6 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

Update: 2016-12-21 19:06 IST

ಕೊಚ್ಚಿ,ಡಿ.21: ಎರ್ನಾಕುಲಂ ಮಹಾರಾಜಾಸ್ ಕಾಲೇಜ್‌ನ 6 ವಿದ್ಯಾರ್ಥಿಗಳನ್ನು ಕವಿತೆ ಬರೆದ ಪೋಸ್ಟರ್ ಅಂಟಿಸಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.ಕುರಿಪ್ಪುಯ ಶ್ರೀಕುಮಾರ್ ಎಂಬವರ ಕವಿತೆಬರೆದ ಪೋಸ್ಟರ್ ಅಂಟಿಸಿದ್ದಕ್ಕಾಗಿ ಬಂಧಿಸಲಾಗಿದೆಎನ್ನಲಾಗಿದೆ. 

ಧಾರ್ಮಿಕ ವಿದ್ವೇಷ ಹರಡುವ ಪೋಸ್ಟರ್ ಅಂಟಿಸಿದ ಆರೋಪದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಜಾಮೀನುರಹಿತ ಕಲಂಪ್ರಕಾರ ಕೇಸು ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಪ್ರಿನ್ಸಿಪಾಲ್ ದೂರಿನ ಪ್ರಕಾರ ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದೂ ಈಗಲೂ ಕಾರಣ ನಿಗೂಢವಾಗಿದೆ. ಇದೇ ಕಾಲೇಜು ಕ್ಯಾಂಪಸ್‌ನಲ್ಲಿ ಗಾಂಜಾ ಮಾಫಿಯ ಸಕ್ರಿಯವಾಗಿದೆ ಎಂಬ ದೂರು ಇದೆ. ಬಂಧಿಸಲಾದ ಎಲ್ಲ ವಿದ್ಯಾರ್ಥಿಗಳು ಮಾಜಿ ಎಸ್‌ಎಫ್‌ಐ ಕಾರ್ಯಕರ್ತರು ಎನ್ನಲಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News