×
Ad

ನೋಟು ರದ್ದತಿಗೆ ವಿರುದ್ಧವಾಗಿರುವವರು ‘ಪಾಕಿಸ್ತಾನದಂತಹವರು’: ಪ್ರಧಾನಿ

Update: 2016-12-22 19:05 IST

ಹೊಸದಿಲ್ಲಿ, ಡಿ.22: ನೋಟು ರದ್ದತಿಗೆ ವಿರುದ್ಧವಾಗಿರುವವರು ‘ಪಾಕಿಸ್ತಾನದಂತಹವರು’ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೊಡ್ಡ ವೌಲ್ಯದ ನೋಟು ನಿಷೇಧವನ್ನು ಟೀಕಿಸುತ್ತಿರುವ ವಿಪಕ್ಷೀಯರ ವಿರುದ್ಧ ಇಂದು ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನಲ್ಲಿ ಎಬ್ಬಿಸಿದ್ದ ಕೋಲಾಹಲವು, ಭಾರತದೊಳಗೆ ಭಯೋತ್ಪಾದಕರು ನುಸುಳುವುದನ್ನು ಖಚಿತಪಡಿಸಲು ಪಾಕಿಸ್ತಾನವು ನಡೆಸುವ ಗುಂಡು ದಾಳಿಯಂತೆ. ಅದೇ ರೀತಿ ಸಂಸತ್ತಿನಲ್ಲಿ ನಡೆಸುವ ಕೋಲಾಹಲ ವಂಚಕರಿಗೆ ಪಾರಾಗಲು ಅವಕಾಶ ಕಲ್ಪಿಸುತ್ತದೆಯೆಂದು ಅವರು ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ರಾಜಕಾರಣಿಗಳು ಭ್ರಷ್ಟರಿಗೆ ಬೆಂಬಲವಾಗಿ ನಿಲ್ಲತ್ತಾರೆಂಬುದನ್ನು ತಾನೆಂದೂ ಕಲ್ಪಿಸಿರಲಿಲ್ಲವೆಂದು ಮೋದಿ ಟೀಕಿಸಿದ್ದಾರೆ.

ನೋಟು ರದ್ದತಿಯ ಕುರಿತಾಗಿ ಚರ್ಚೆಗೆ ವಿಪಕ್ಷಗಳ ಪಟ್ಟು ಹಾಗೂ ಆಳುವ ಪಕ್ಷಗಳ ನಿರಾಕರಣೆಯಿಂದಾಗಿ ಸಂಪೂರ್ಣ ವಿಫಲವಾದ ಸಂಸತ್ತಿನ ಇತ್ತೀಚಿನ ಚಳಿಗಾಲದ ಅಧಿವೇಶನವನ್ನುಲ್ಲೇಖಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಯೊಂದನ್ನು ಪ್ರತಿಭಟಿಸುತ್ತಿರುವುದಕ್ಕಾಗಿ ವಿಪಕ್ಷಗಳನ್ನು ಪ್ರಧಾನಿ ಟೀಕಿಸಿದ್ದಾರೆ.

ನಮ್ಮ ಸೇನೆ ನಮಗೆ ಹೆಮ್ಮೆ ತರುತ್ತಿದೆ. ಆದರೆ, ಕೆಲವರು ಸೈನಿಕರ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ. ಸಂಸ್ಥೆಗಳನ್ನು ಆರೀತಿ ನೋಡುವುದು ಸರಿಯೇ ಎಂದವರು ಪ್ರಶ್ನಿಸಿದ್ದಾರೆ. ಈ ಮೂಲಕ ಅವರು ಸೆಪ್ಟಂಬರ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಿಜವಾಗಿಯೂ ನಡೆದಿದೆಯೇ ಎಂದು ಪ್ರಶ್ನಿಸಿದ ಕೆಲವು ರಾಜಕಾರಣಿಗಳನ್ನು ಚುಚ್ಚಿದ್ದಾರೆ.

ಆನ್‌ಲೈನ್ ಬ್ಯಾಂಕಿಂಗ್‌ನತ್ತ ಸಾಗುವಂತೆ ಯುವಕರನ್ನು ಹುರಿದುಂಬಿಸಿದ ಮೋದಿ, ತಂತ್ರಜ್ಞಾನವು ಭಾರತವನ್ನು ಬಡತನದಿಂದ ಮೇಲೆತ್ತುವ ಸಾಧನ ಎಂದಿದ್ದಾರೆ.

ಶೇ.50ರಷ್ಟು ಬಡವರಿರುವ ದೇಶವೊಂದರಲ್ಲಿ ತಂತ್ರಜ್ಞಾನದಂತಹ ವಿಷಯಗಳು ಏನುತಾನೇ ಮಾಡಿಯಾವು? ಎಂದು ಕಾಂಗ್ರೆಸ್‌ನ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು. ಸಿಂಗ್, ಅವರದೇ ಪ್ರಗತಿ ಪತ್ರ ನೀಡಿದ್ದಾರೆಯೇ ಅಥವಾ ತನ್ನದೇ? ಎಂಬುದನ್ನು ಜನರೇ ಹೇಳಲಿ. ಈ ಶೇ.50 ಬಡತನ ಯಾರ ಕೊಡುಗೆ? ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News