ರೂ.25 ಕೋಟಿಯ ಹಳೆನೋಟು ಬದಲಾವಣೆ: ವ್ಯಾಪಾರಿಯ ಬಂಧನ
ಹೊಸದಿಲ್ಲಿ, ಡಿ.22: ರೂ.25 ಕೋಟಿ ಮೊತ್ತದ ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಬದಲಾಯಿಸಿದ ಆರೋಪಕ್ಕೆ ಸಂಬಂಧಿಸಿ ಕೋಲ್ಕತಾದ ವಾಪಾರಿಯೊಬ್ಬನನ್ನು ಜಾರಿ ನಿರ್ದೇಶನಾಲಯವು ಬಂಧಿಸಿವೆ.
ಆರೋಪಿ ವ್ಯಾಪಾರಿಯನ್ನು ಅಧಿಕಾರಿಗಳು ಪಾರಸ್ ಎಂ. ಲೋಧಾ ಎಂದು ಗುರುತಿಸಿದ್ದಾರೆ. ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಬಳಿಕ ನಿನ್ನೆ ರಾತ್ರಿ ಆತನನ್ನು ಬಂಧಿಸಲಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಧಾ ದೇಶದಿಂದ ಪರಾರಿಯಾಗಲು ಯತ್ನಿಸುತ್ತಿದ್ದನೆನ್ನಲಾಗಿದೆ. ಲುಕೌಟ್ ಸುತ್ತೋಲೆಯೊಂದರ ಆಧಾರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆತನನ್ನು ಮೊದಲು ಅಡ್ಡಗಟ್ಟಿದ್ದರು. ಶೇಖರ್ ರೆಡ್ಡಿ ಹಾಗೂ ರೋಹಿತ್ ಟಂಡನ್ ಪ್ರಕರಣಗಳಲ್ಲಿ ರೂ.25 ಸಾವಿರ ಮೊತ್ತದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತಿಸಿದುದಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಲೋಧಾನನ್ನು ಬಂಧಿಸಿತೆಂದು ಮೂಲಗಳು ವಿವರಿಸಿವೆ.
ಲೋಧಾನನ್ನು ಇಲ್ಲಿನ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಿ, ಹಣ ಚೆಲುವೆ ತಡೆ ಕಾಯ್ದೆಯ ಪ್ರಸ್ತಾವಗಳನ್ವಯ ಹೆಚ್ಚಿನ ವಿಚಾರಣೆಗೆ ಕಸ್ಟಡಿಯನ್ನು ಕೇಳಲಾಗುವುದು.