ಟಾಟಾ ಸ್ಟೀಲ್ ನಿರ್ದೇಶಕನ ಹುದ್ದೆಯಿಂದ ನುಸ್ಲಿ ವಾಡಿಯಾಗೆ ಗೇಟ್‌ಪಾಸ್
Update: 2016-12-22 19:20 IST
ಹೊಸದಿಲ್ಲಿ,ಡಿ.22: ಟಾಟಾ ಸ್ಟೀಲ್ ಕಂಪನಿಯ ಆಡಳಿತ ಮಂಡಳಿಯಿಂದ ಸ್ವತಂತ್ರ ನಿರ್ದೇಶಕ ನುಸ್ಲಿವಾಡಿಯಾ ಅವರನ್ನು ತಕ್ಷಣವೇ ವಜಾಗೊಳಿಸುವ ಪ್ರಸ್ತಾವನೆಯ ಪರವಾಗಿ ಶೇರುದಾರರು ಮತಗಳನ್ನು ಚಲಾಯಿಸಿದ್ದಾರೆ.
ಬುಧವಾರ ನಡೆದ ವಿಶೇಷ ಸರ್ವಸಾಧಾರಣ ಸಭೆ(ಇಜಿಎಂ)ಯಲ್ಲಿ ಶೇ.90.80 ಮತಗಳು ಪ್ರಸ್ತಾವನೆಯ ಪರವಾಗಿ ಚಲಾವಣೆಯಾದರೆ, ವಾಡಿಯಾ ಪರವಾಗಿ ಶೇ.9.20 ಮತಗಳು ಚಲಾವಣೆಯಾಗಿವೆ.
ಇಜಿಎಂ ಕಲಾಪಗಳು ಪೂರ್ವಯೋಜಿತವಾಗಿವೆ ಎಂದು ಹೇಳಿದ ಕೈಗಾರಿಕೋದ್ಯಮಿ ವಾಡಿಯಾ ಸಭೆಗೆ ಹಾಜರಾಗಿರಲಿಲ್ಲ.