ಫೈಝಲ್ ಕೊಲೆ: ಸಾಕ್ಷ್ಯ ಸಂಗ್ರಹ ವೇಳೆ ಆರೆಸ್ಸೆಸ್ಸಿಗರಿಂದ ವರದಿಗಾರರಿಗೆ ಹಲ್ಲೆ
Update: 2016-12-22 19:58 IST
ಮಲಪ್ಪುರಂ,ಡಿ.22: ಕೊಡಿಂಞಿ ಫೈಝಲ್ ಕೊಲೆ ಪ್ರಕರಣದ ಸಾಕ್ಷ್ಯ ಪೊಲೀಸರು ಸಂಗ್ರಹಿಸುತ್ತಿದ್ದಾಗ ಮಾಧ್ಯಮ ವರದಿಗಾರರಿಗೆ ಹಲ್ಲೆ,ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ತಿರೂರ್ ಪುಲ್ಲೂಣಿಯಲ್ಲಿ ಪೊಲೀಸರು ಸಾಕ್ಷ್ಯ ಸಂಗ್ರಹಿಸುತ್ತಿದ್ದ ವೇಳೆ ಆರೆಸ್ಸೆಸ್ ಕಾರ್ಯಕರ್ತರು ವರದಿ ಗೆ ತೆರಳಿದ್ದ ಮಾಧ್ಯಮದವರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಆರೋಪಿ ಪ್ರಜೀಷ್‌ನ ಮನೆಯಲ್ಲಿ ಪೊಲೀಸರು ಸಾಕ್ಷ್ಯ ಪಡೆಯುತ್ತಿದ್ದರು. ಇದೆವೇಳೆ ದೇಶಾಭಿಮಾನಿ ತಿರೂರ್ ವರದಿಗಾರ ವಿನೋದ್ ತಲಪ್ಪಿಳ್ಳಿ, ತುಂಚಿನ್ ವಿಷನ್ ಕ್ಯಾಮರಾಮೆನ್ ಶಬೀರ್ ಎಬ್ಬಿಬ್ಬರಿಗೆ ಹೊಡೆದು ಕೊಲೆ ಬೆದರಿಕೆಹಾಕಿ ಅರೆಸ್ಸಿಸ್ಸಿಗರು ಹೊಡೆದಿದ್ದಾರೆ.
ವೀಡಿಯೊ ಚಿತ್ರೀಕರಣವನ್ನು ತಡೆಯಲೆತ್ನಿಸಿದ ಆರೆಸ್ಸೆಸ್ ಕಾರ್ಯಕರ್ತರು, ದೃಶ್ಯಗಳನ್ನು ಪ್ರಸಾರ ಮಾಡಿದರೆ ಕೊಲ್ಲುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರಿಂದ ಇಬ್ಬರನ್ನು ಪೊಲೀಸರು ರಕ್ಷಿಸಿದರೆಂದು ವರದಿ ತಿಳಿಸಿದೆ.