×
Ad

"ನೀವು ನನ್ನನ್ನು ವ್ಯಂಗ್ಯ ಮಾಡಿ. ಆದರೆ ಯುವಜನತೆಯ ಪ್ರಶ್ನೆಗಳಿಗೆ ಉತ್ತರಿಸಿ"

Update: 2016-12-22 20:23 IST

ಹೊಸದಿಲ್ಲಿ, ಡಿ.22: "ಪ್ರಶ್ನೆ ಕೇಳಿದವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಂಗ್ಯ ಮಾಡುತ್ತಾರೆ. ಹಾಸ್ಯ ಮಾಡುತ್ತಾರೆ. ನೀವು ನನ್ನನ್ನು ವ್ಯಂಗ್ಯ  ಮಾಡಿ ಆದರೆ ಯುವಜನೆತೆಯ  ಪ್ರಶ್ನೆಗಳಿಗೆ ಉತ್ತರಿಸಿ ” ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತೆ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.


ಉತ್ತರ ಪ್ರದೇಶದ ಬರಾಹಿಜ್‌ನಲ್ಲಿ ಮಾತನಾಡಿದ ರಾಹುಲ್‌  ಗಾಂಧಿ " ಗುಜರಾತ್‌ ನಲ್ಲಿ ನಾನು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಬದಲು ನನ್ನನ್ನು ವ್ಯಂಗ್ಯ ಮಾಡಿದರು. ಮೊದಲು ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ. ಸಹರಾ ಗ್ರೂಪ್ ನೀಡಿದ 10 ಪಾಕೇಟ್ ನಲ್ಲಿ ಏನಿದೆ ಎಂಬುದನ್ನು   ಬಹಿರಂಗಪಡಿಸಲಿ. ಆ ಬಳಿಕ ವ್ಯಂಗ್ಯ ಮಾಡಲಿ ” ಎಂದು ರಾಹುಲ್‌ ಸವಾಲೊಡ್ಡಿದ್ದಾರೆ.

 ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ಸುಬ್ರತಾ ರಾಯ್‌ ಒಡೆತನದ ಸಹಾರಾ ಸಂಸ್ಥೆಯಿಂದ 40 ಕೋಟಿ ರೂ.ಮತ್ತು ಬಿರ್ಲಾ ಕಂಪನಿಯಿಂದ 12 ಕೋಟಿ ರೂ.ಸೇರಿ ಒಟ್ಟು 52 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ನಿನ್ನೆ ರಾಹುಲ್‌  ಗಂಭೀರ ಆರೋಪ  ಮಾಡಿದ್ದರು.

ಈ ಆರೋಪಕ್ಕೆ  ಸಂಬಂಧಿಸಿದ ದಾಖಲೆಯನ್ನು ರಾಹುಲ್‌ ಇಂದು ಬಿಡುಗಡೆ ಮಾಡಿದ್ದರು.ಆದರೆ ರಾಹುಲ್‌ ಮಾಡಿದ್ದ  ಆರೋಪವನ್ನು ಲಘವಾಗಿ ಪರಿಗಣಿಸಿದ  ಪ್ರಧಾನಿ ಮೋದಿ ಅವರು ರಾಹುಲ್‌ ಹೆಸರನ್ನು ಹೇಳದೆ ಯುವ ನಾಯಕರೊಬ್ಬರು ಭಾಷಣ ಮಾಡಲು ಕಲಿಯುತ್ತಿದ್ದಾರೆ . ಯುವ ನಾಯಕ ಭಾಷಣ ಮಾಡಲು ಆರಂಭಿಸಿರುವುದು ನನಗೆ ಖುಷಿಯಾಗಿದೆ  ಎಂದು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News