ನಜೀಬ್‌ ಜಂಗ್‌ರನ್ನು ಭೇಟಿಯಾದ ಸಿಎಂ ಕೇಜ್ರಿವಾಲ್

Update: 2016-12-23 05:40 GMT

ಹೊಸದಿಲ್ಲಿ, ಡಿ.23: ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್‌ ಹುದ್ದೆ ತ್ಯಜಿಸಿರುವ ನಜೀಬ್‌ ಜಂಗ್‌ ಅವರನ್ನು ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್ ಇಂದು ಭೇಟಿಯಾದರು.
ರಾಜೀನಾಮೆ ನೀಡಿರುವ ನಜೀಬ್‌ ಜಂಗ್‌ ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್‌ ಒಟ್ಟಿಗೆ ಬೆಳಗಿನ ಉಪಹಾರ ಸೇವಿಸಿದರು. ಇವರ ನಡುವೆ 40 ನಿಮಿಷಗಳ ಮಾತುಕತೆ ನಡೆಯಿತು. " ವೈಯಕ್ತಿಕ ಕಾರಣದಿಂದಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ನಜೀಬ್‌ ಜಂಗ್‌ ನನ್ನಲ್ಲಿ ತಿಳಿಸಿದ್ದಾರೆ” ಎಂದು ಮುಖ್ಯ ಮಂತ್ರಿ ಕೇಜ್ರಿವಾಲ್‌ ಸುದ್ದಿಗಾರರಿಗೆ ತಿಳಿಸಿದರು.
 ನಜೀಬ್‌ ಜಂಗ್‌  ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದರು..
2013 ಜುಲೈನಲ್ಲಿ ದಿಲ್ಲಿಯ ಲೆಫ್ಟಿನೆಂಟ್  ಗವರ್ನರ್‌  ಆಗಿ ಅಧಿಕಾರ ವಹಿಸಿಕೊಂಡಿದ್ದ ನಜೀಬ್‌ ಜಂಗ್‌  ಅವರ ಅಧಿಕಾರದ ಅವಧಿ  ಮುಗಿಯಲು  ಇನ್ನೂ   18 ತಿಂಗಳು ಬಾಕಿ ಇವೆ. ಇದಕ್ಕೂ ಮುನ್ನವೇ ಹುದ್ದೆಯಿಂದ ನಿರ್ಗಮಿಸಿದ್ದಾರೆ.
ಜಂಗ್‌ ರಾಜೀನಾಮೆಯಿಂದ ತೆರವಾಗಿರುವ ಸ್ಥಾನದ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ. ಈ ಪೈಕಿ ಅನಿಲ್‌ ಬೈಜಾಲ್‌ ಪ್ರಮುಖ ಆಕಾಂಕ್ಷಿ. ಅನಿಲ್‌ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರ್‌ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News