ತಮಿಳಿಗೆ ಕಾಜಲ್ ರೀಎಂಟ್ರಿ
Update: 2016-12-23 19:25 IST
ಬರೋಬ್ಬರಿ 19 ವರ್ಷಗಳ ಸುದೀರ್ಘ ಅಂತರದ ಬಳಿಕ ಬಾಲಿವುಡ್‌ನ ಖ್ಯಾತ ನಟಿ ಕಾಜಲ್ ಮತ್ತೆ ತಮಿಳುಚಿತ್ರರಂಗಕ್ಕೆ ಮರಳಿದ್ದಾರೆ. ಖ್ಯಾತ ನಟ ಧನುಷ್‌ರ ನಾದಿನಿ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್‌ರ ಪುತ್ರಿ ಸೌಂದರ್ಯಾ ನಿರ್ದೇಶನದ ‘ವೇಲೈಯಿಲ್ಲಾ ಪಟ್ಟಾಧಾರಿ 2’ ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸಲಿದ್ದಾರೆ. ಧನುಷ್ ಚಿತ್ರದ ನಾಯಕ ಮಾತ್ರವಲ್ಲ ಸಹನಿರ್ಮಾಪಕರೂ ಹೌದು. 1997ರಲ್ಲಿ ತೆರೆಕಂಡ ‘ಮಿನ್ಸಾರ ಕನವು’ ಕಾಜಲ್ ಅಭಿನಯದ ಮೊದಲ ತಮಿಳು ಚಿತ್ರ.
ಬಹಳ ಸಮಯದ ಬಳಿಕ ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವುದರಿಂದ ತನಗೆ ಒಂದಿಷ್ಟು ಹಿಂಜರಿಕೆಯ ಜೊತೆಗೆ ಸಂತಸವೂ ಆಗುತ್ತಿದೆಯೆಂದು ಕಾಜಲ್ ಅಂಬೋಣ. ‘‘ವೇಲೈಯಿಲ್ಲಾ ಪಟ್ಟಾಧಾರಿ 2’’ ಚಿತ್ರ ಇತ್ತೀಚೆಗೆ ಚೆನ್ನೈನಲ್ಲಿ ಸೆಟ್ಟೇರಿದ್ದು, ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಕಾಜಲ್ ತನ್ನ ವಯಸ್ಸಿಗಿಂತಲೂ ಕಿರಿಯವಳಾಗಿ ಕಾಣಿಸಿಕೊಳ್ಳಲಿದ್ದಾರೆ.