ಆರ್‌ಜಿವಿಯಿಂದ ಶಶಿಕಲಾ ಸಿನೆಮಾ
Update: 2016-12-23 19:26 IST
ರಾಮ್‌ಗೋಪಾಲ್ ವರ್ಮಾ ಅವರ ಚಿತ್ರಗಳು ಒಂದಲ್ಲ ಒಂದು ಕಾರಣಗಳಿಗಾಗಿ ವಿವಾದಗಳನ್ನು ಸೃಷ್ಟಿಸಿವೆ. ಇದೀಗ ಮತ್ತೊಂದು ವಿವಾದಾತ್ಮಕ ಕಥೆಯುಳ್ಳ ಚಿತ್ರವನ್ನು ನಿರ್ಮಿಸಲು ಅವರು ತಯಾರಿ ನಡೆಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಜಯಲಲಿತಾ ಅವರ ಆಪ್ತ ಸ್ನೇಹಿತೆ ಶಶಿಕಲಾ ಅವರ ಬದುಕನ್ನು ಬೆಳ್ಳಿತೆರೆಗೆ ತರಲು ತಯಾರಿ ನಡೆಸಿದ್ದಾರೆ. ಎಲ್ಲಾ ರೀತಿಯಲ್ಲೂ ಈ ಚಿತ್ರವು ವಿವಾದಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದೆ.