ಕೇಬಲ್ ಟಿವಿ ಡಿಜಿಟಲೀಕರಣ ಅಂತಿಮ ದಿನಾಂಕ ವಿಸ್ತರಣೆ

Update: 2016-12-23 15:22 GMT

ಹೊಸದಿಲ್ಲಿ, ಡಿ.23: ನಾಲ್ಕನೇ ಹಂತದ ಕೇಬಲ್ ಟಿವಿ ಡಿಜಿಟಲೀಕರಣದ ಅಂತಿಮ ದಿನವನ್ನು 2017ರ ಮಾರ್ಚ್ 31ರವರೆಗೆ ವಿಸ್ತರಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ.

 ಕೋರ್ಟಿನಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಇರುವ ಮತ್ತು ನಾಲ್ಕನೇ ಹಂತದ ಡಿಜಿಟಲೀಕರಣ ವ್ಯಾಪ್ತಿಯಲ್ಲಿ ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಮೂರನೇ ಹಂತದ ಡಿಜಿಟಲೀಕರಣ ಪ್ರಕ್ರಿಯೆಯ ವ್ಯಾಪ್ತಿಯ ಜನರು ಸೆಟ್‌ಟಾಪ್ ಬಾಕ್ಸ್ ಅಳವಡಿಸುವ ಅಂತಿಮ ದಿನಾಂಕವನ್ನು 2017ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಅಂತಿಮ ದಿನಾಂಕವನ್ನು ಮತ್ತೆ ವಿಸ್ತರಿಸಲಾಗದು ಎಂದು ಸರಕಾರ ತಿಳಿಸಿದೆ.

   ನಾಲ್ಕನೇ ಹಂತದ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ 2016ರ ಡಿಸೆಂಬರ್ 31 ಅಂತಿಮ ದಿನ ಎಂದು ನಿಗದಿಗೊಳಿಸಲಾಗಿತ್ತು. ಆದರೆ ಕೆಲವು ಸಂಸ್ಥೆಗಳು, ಜನರು ವಿವಿಧ ಹೈಕೋರ್ಟ್‌ಗಳಲ್ಲಿ ದಾವೆ ಹೂಡಿ, ಅಂತಿಮ ದಿನಾಂಕವನ್ನು ಮುಂದೂಡುವಂತೆ ಕೋರಿದ್ದು ಈ ಬಗ್ಗೆ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News