×
Ad

ಉತ್ತರ ಧ್ರುವದಲ್ಲಿ 20 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣತೆ

Update: 2016-12-24 22:34 IST

ಲಂಡನ್, ಡಿ. 24: ಉತ್ತರ ಧ್ರುವದ ಉಷ್ಣತೆ ಈ ಬಾರಿಯ ಕ್ರಿಸ್ಮಸ್ ವೇಳೆ ಸರಾಸರಿಗಿಂತ 20 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಬಹುದು ಎಂಬುದಾಗಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದು ದಾಖಲೆಯ ಉಷ್ಣ ಮಾರುತವಾಗಿದೆ.

ಋತುವಿಗೆ ವಿರುದ್ಧವಾಗಿ ಆರ್ಕ್‌ಟಿಕ್ ವಲಯದಲ್ಲಿ ಕಂಡುಬಂದಿರುವ ಬಿಸಿ ವಾತಾವರಣ ಮಾನವ ನಿರ್ಮಿತ ಹವಾಮಾನ ಬದಲಾವಣೆಯೊಂದಿಗೆ ನೇರ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷದ ನವೆಂಬರ್ ಮತ್ತು ಡಿಸೆಂಬರ್‌ಗಳಲ್ಲಿ ಉಷ್ಣತೆ ಸರಾಸರಿಗಿಂತ ಐದು ಡಿಗ್ರಿ ಸೆಲ್ಸಿಯಸ್ ಅಧಿಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News