ಬ್ಯಾಂಕಿನ ಸಾಲಿನಲ್ಲಿ ನಿಂತಿದ್ದ ವೃದ್ಧ ಕುಸಿದು ಬಿದ್ದು ಸಾವು

Update: 2016-12-27 09:01 GMT
ಸಾಂದರ್ಭಿಕ ಚಿತ್ರ

ಬಲಿಯಾ,ಡಿ.27:ಹಣವನ್ನು ಹಿಂಪಡೆಯಲು ಬ್ಯಾಂಕ್ ಶಾಖೆಯೊಂದರ ಹೊರಗೆ ನಾಲ್ಕು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ಕಾದು ನಿಂತಿದ್ದ ವೃದ್ಧರೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿಯ ಸಹತ್ವಾರ್ ಪ್ರದೇಶದಲ್ಲಿ ನಡೆದಿದೆ.

ಡೊಮರಿಯಾ ಗ್ರಾಮದ ನಿವಾಸಿ ಗರ್ಜು ಚೌಧರಿ(70) ನಿನ್ನೆ ಮಧ್ಯಾಹ್ನ ಎಸ್‌ಬಿಐ ಶಾಖೆಯಲ್ಲಿನ ತನ್ನ ಖಾತೆಯಿಂದ ಹಣ ಪಡೆಯಲು ಬಂದಿದ್ದರು.

ಈ ಬಗ್ಗೆ ತನಿಖೆ ನಡೆಸುವಂತೆ ಸಂಬಂಧಿಸಿದ ಉಪ ವಿಭಾಗಾಧಿಕಾರಿಗೆ ಸೂಚಿಸ ಲಾಗಿದ್ದು, ಅವರ ವರದಿ ಬಂದ ನಂತರ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಗೋವಿಂದ ಎಸ್.ಎನ್.ರಾಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News