ಎಂಎಂ ಮಣಿಯನ್ನು ಸಚಿವ ಸಂಪುಟದಿಂದ ಕೈಬಿಡಬೇಕು: ವಿಎಸ್ ಅಚ್ಯುತಾನಂದನ್
ತಿರುವನಂತಪುರಂ,ಡಿ. 27: ಸಚಿವ ಎಂಎಂ ಮಣಿ ಅವರನ್ನು ಸಚಿವಸಂಪುಟದಿಂದ ಕೈಬಿಡಬೇಕೆಂದು ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ವಿ.ಎಸ್. ಅಚ್ಯುತಾನಂದನ್ ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದಾರೆ. ಅಂಚೇರಿ ಬೇಬಿ ಕೊಲೆ ಪ್ರಕರಣದಿಂದಕೈಬಿಡಬೇಕೆಂದು ಎಂಎಂ ಮಣಿ ಸಲ್ಲಿಸಿದ ಅರ್ಜಿಯನ್ನು ಕೋರ್ಟು ತಳ್ಳಿಹಾಕಿದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಮುಂದುವರಿಯುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಪಾರ್ಟಿ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿಗೆ ಅವರು ಬರೆದ ಪತ್ರದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.
ಕೋರ್ಟು ತೀರ್ಪನ್ನು ಪರಿಗಣಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೆಕು ಎಂದು ವಿಎಸ್ ಕೇಂದ್ರ ನಾಯರನ್ನುಆಗ್ರಹಿಸಿದ್ದಾರೆ. ಕ್ರಿಮಿನಲ್ ಪ್ರಕರಣದ ಆರೋಪಿಯೊಬ್ಬ ಸಚಿವನಾಗಿ ಮುಂದುವರಿಯುವುದು ಸರಿಯಲ್ಲ. ಅದು ಪಾರ್ಟಿ ನಿಲುವಿಗೆ ವಿರುದ್ಧವಾಗಿದೆ ಎಂದು ಅವರು ಸೂಚಿಸಿದ್ದಾರೆ.
ಮುಂದಿನ ವಾರ ನಡೆಯಲಿರುವ ಕೇಂದ್ರ ಸಮಿತಿ ಸಭೆಯಲ್ಲಿ ಇದು ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಅದೇವೇಳೆ ಕೇರಳ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಸಹಿತ ರಾಜ್ಯ ಸಮಿತಿ ಮಣಿಯನ್ನು ಸಚಿವಸಂಪುಟದಿಂದ ಕೈಬೇಡಬೇಕಿಲ್ಲ ಎಂಬ ನಿಲುವು ಹೊಂದಿದ್ದಾರೆಂದು ವರದಿ ತಿಳಿಸಿದೆ.