ಬ್ಯಾಂಕ್ ದರೋಡೆ: 31ಲಕ್ಷ ರೂಪಾಯಿಯೊಂದಿಗೆ ಕಳ್ಳರು ಪರಾರಿ
Update: 2016-12-27 15:49 IST
ತಿರುವಲ್ಲ,ಡಿ.27: ಕೇರಳದ ತಿರುವಲ್ಲ ತುಗಲಶ್ಶೇರಿ ಎಂಬಲ್ಲಿನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಶಾಖೆಯಿಂದ ಸುಮಾರು 31 ಲಕ್ಷ ರೂಪಾಯಿ ದರೋಡೆ ನಡೆದಿದೆ. ಬ್ಯಾಂಕ್‌ನಲ್ಲಿ ಮೂರು ಸೆಲ್ಫ್‌ಗಳಿದ್ದು, ಎರಡನ್ನು ಕಳ್ಳರು ಒಡೆದು 16 ಲಕ್ಷರೂಪಾಯಿ ಮೌಲ್ಯದ ಹೊಸನೋಟು, 15 ಲಕ್ಷ ರೂಪಾಯಿ ಮೌಲ್ಯದ ಹಳೆ ನೋಟುಗಳನ್ನು ಎಗರಿಸಿದ್ದಾರೆ.
ಗ್ಯಾಸ್ ಕಟ್ಟರ್‌ನಿಂದ ಬ್ಯಾಂಕ್ ಕಿಟಕಿ ಸರಳುಗಳನ್ನು ಕತ್ತರಿಸಿ ಕಳ್ಳರು ಒಳ ನುಗ್ಗಿದ್ದಾರೆ. ಬ್ಯಾಂಕ್‌ನ ಇತರ ಶಾಖೆಗಳಿಗೆ ವಿತರಿಸಲು ಇರಿಸಿದ್ದ ಹಣ ಕಳ್ಳರ ಪಾಲಾಗಿದೆ ಎಂದು ವರದಿ ತಿಳಿಸಿದೆ.