ಸಹರಾ ಡೈರಿ: ಶುದ್ಧರಾಗಿ ಹೊರಬರುವ ಹೊಣೆ ಪ್ರಧಾನಿಯ ಮೇಲಿದೆ: ಶೀಲಾ
ಹೊಸದಿಲ್ಲಿ, ಡಿ.27: ‘ಸಹರಾ ಡೈರಿಗಳ’ ಕುರಿತು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್‌ರ ಹೇಳಿಕೆಗಳು ಕಾಂಗ್ರೆಸ್ ಪಕ್ಷವನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸಿದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಹುಲ್‌ಗಾಂಧಿಯವರ ಭ್ರಷ್ಟಾಚಾರ ಆರೋಪದ ಹರಿತವನ್ನು ಕಳೆದ ಕೆಲವೇ ತಾಸುಗಳಲ್ಲಿ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಪಕ್ಷದ ನಿಲುವನ್ನು ಅಪ್ಪಿಕೊಂಡಿದ್ದು, ಆರೋಪಗಳಿಂದ ಶುದ್ಧರಾಗಿ ಹೊರಬರುವ ಹೊಣೆ ಪ್ರಧಾನಿಯ ಮೇಲಿದೆ ಎಂದಿದ್ದಾರೆ.
ತಾನು ಏನು ಹೇಳಬೇಕಾಗಿತ್ತೋ ಅದನ್ನು ಹೇಳಿದ್ದೇನೆ. ಚೆಂಡೀಗ ಪ್ರಧಾನಿ ಕಚೇರಿ ಮತ್ತು ಇತರರ ಅಂಗಳದಲ್ಲಿದೆ. ಅವರು ಪ್ರತಿಕ್ರಿಯಿಸಿ, ಆರೋಪ ಮುಕ್ತರಾಗಿ ಹೊರಬರುವರೇ? ಎಂದು ಶೀಲಾ ಸೋಮವಾರ ರಾತ್ರಿ ಟ್ವೀಟಿಸಿದ್ದಾರೆ.
ಪ್ರಧಾನಿ ಮೋದಿಯವರ ವಿರುದ್ಧ ತನ್ನ ಆರೋಪಕ್ಕೆ ಪುರಾವೆಯೆಂದು ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಟ್ವೀಟೊಂದರಲ್ಲಿ ಪ್ರಕಟಿಸಿದ್ದ ಸಹರಾ ದಾಖಲೆಯೆನ್ನಲಾದ ಪಟ್ಟಿಯಲ್ಲಿ ಉತ್ತರಪ್ರದೇಶದ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್‌ರ ಹೆಸರೂ ಇತ್ತು. ಅದನ್ನವರು ತಳ್ಳಿ ಹಾಕಿ, ಅದೊಂದು ಅಂತೆಕಂತೆ ಆರೋಪಗಳಲ್ಲಿ ಎಳ್ಳಷ್ಟೂ ಸತ್ಯವಿಲ್ಲ. ಈ ಆರೋಪಗಳನ್ನು ತಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದಿದ್ದರು.
ಈ ವಿಷಯದಲ್ಲಿ ಬಿಜೆಪಿಯ ನಿಲುವನ್ನೇ ಪ್ರತಿಧ್ವನಿಸಿದ್ದ ಶೀಲಾ, ಸುಪ್ರೀಂ ಕೋರ್ಟ್ ಈಗಾಗಲೇ ಅದನ್ನು ತಿರಸ್ಕರಿಸಿದೆ ಎಂದಿದ್ದರು.