×
Ad

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಗೆ ಜ.1 ರಂದು ನಿಶ್ಚಿತಾರ್ಥ?

Update: 2016-12-29 16:02 IST

ಹೊಸದಿಲ್ಲಿ, ಡಿ.29: ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಈ ವರ್ಷ ಜೋಡಿ ಹಕ್ಕಿಗಳಾಗಿ ಹಾರಾಡಿ ಹಲವು ಊಹಾಪೋಹಗಳಿಗೆ ಗ್ರಾಸವಾಗಿದ್ದರು. ಇದೀಗ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ನಿರ್ಧರಿಸಿರುವ ಈ ಇಬ್ಬರು ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

 ಒಂದು ವರದಿಯ ಪ್ರಕಾರ, ಕೊಹ್ಲಿ ಹಾಗೂ ಅನುಷ್ಕಾ ಹೊಸ ವರ್ಷದ ಮೊದಲ ದಿನವೇ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಉತ್ತರಾಖಂಡದ ನರೇಂದ್ರ ನಗರದ ಹೊಟೇಲ್ ಆನಂದ್‌ನಲ್ಲಿ ನೆರವೇರುವ ಸಾಧ್ಯತೆಯಿದೆ. ಆದರೆ, ಈ ಇಬ್ಬರು ಅಧಿಕೃತವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ. ಆದರೆ ಅವರಿಬ್ಬರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಈ ಸುದ್ದಿಯನ್ನು ಖಚಿತಪಡಿಸಿದೆ.

 ಅನುಷ್ಕಾ ಹಾಗೂ ಕೊಹ್ಲಿ ಇತ್ತೀಚೆಗೆ ಬಿಡುವು ಮಾಡಿಕೊಂಡು ಹಿಲ್ಸ್‌ಗಳಿಗೆ ತೆರಳಿದ್ದರು. ಆದರೆ, ಇಬ್ಬರು ಒಟ್ಟಿಗಿರುವ ಫೋಟೊಗಳನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಕೊಹ್ಲಿ-ಅನುಷ್ಕಾ ನಿಶ್ಚಿತಾರ್ಥ ಸಮಾರಂಭಕ್ಕೆ ಕ್ರಿಕೆಟ್ ವಲಯ ಹಾಗೂ ಬಾಲಿವುಡ್ ರಂಗದ ಜನರು ಭಾಗವಹಿಸುವ ಸಾಧ್ಯತೆಯಿದೆ. ಅನುಷ್ಕಾರ ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಈಗಾಗಲೇ ಉತ್ತರಾಖಂಡಕ್ಕೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News