ಕೇರಳದ ಆರೆಸ್ಸೆಸ್ ಶಿಬಿರಗಳಲ್ಲಿ ಆಯುಧ ತರಬೇತಿ: ರಹಸ್ಯ ಚಿತ್ರೀಕರಣ ನಡೆಸಿದ ಪೀಪಲ್ ಟಿವಿ
ಕಣ್ಣೂರ್ ,ಡಿ. 29: ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ ಶಿಬಿರಂ ಹೆಸರಿನಲ್ಲಿ ಶಾಲೆಗಳಲ್ಲಿ ಆರೆಸ್ಸೆಸ್ ಕೇಂದ್ರೀಕರಿಸಿ ಆಯುದ ತರಬೇತಿ ನೀಡುತ್ತಿರುವುದು ಗುಪ್ತ ಕ್ಯಾಮರಾಗಳಲ್ಲಿ ದಾಖಲಾಗಿದೆ. ಈ ದೃಶ್ಯಗಳನ್ನು, ಕೈರಳಿ ಸಮೂಹದ ಪೀಪಲ್ ಟಿವಿಚಾನೆಲ್ ಪ್ರಸಾರ ಮಾಡಿದೆ.
ಶಾಲಾಡಳಿತಕ್ಕೆ ಸರಿಯಾದ ಮಾಹಿತಿ ನೀಡದೆ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸುತ್ತಿದ್ದೇವೆಂದು ತಪ್ಪು ಮಾಹಿತಿ ನೀಡಿ ಶಾಲೆಗಳನ್ನು ಪಡೆದು ಅಲ್ಲಿ ತನ್ನ ಸ್ವಯಂಸೇವಕರಿಗೆ ಆಯುಧ ತರಬೇತಿ ನೀಡುತ್ತಿದೆ. ಕೇರಳದ ಎಲ್ಲ ಜಿಲ್ಲೆಗಳಲ್ಲಿ ಇಂತಹ ತಲಾ 2 ಶಿಬಿರಗಳನ್ನು ಆರೆಸ್ಸೆಸ್ ಆಯೋಜಿಸುತ್ತಿದೆಎಂದು ಚಾನೆಲ್ ತಿಳಿಸಿದೆ.
ಕಣ್ಣೂರಿನಲ್ಲಿ ಸ್ವಯಂಸೇವಕರಿಗೆ ಆಯುಧ ತರಬೇತಿ ನೀಡುವ ಇಂತಹ ನಾಲ್ಕು ಶಿಬಿರಗಳಿವೆ ಎನ್ನಲಾಗಿದೆ. ಶಿಬಿರಗಳಲ್ಲಿ ಹಗಲಿಡೀ ತರಗತಿ, ರಾತ್ರಿ ಆಯುಧ ಪ್ರಯೋಗವನ್ನು ಇಲ್ಲಿ ಹೇಳಿಕೊಡಲಾಗುತ್ತಿದೆ. ಹದಿಮೂರು ವರ್ಷ ಮೇಲ್ಪಟ್ಟವರನ್ನು ಈ ತರಬೇತಿಗೆ ಆರೆಸ್ಸೆಸ್ ಬಳಸಿಕೊಳ್ಳುತ್ತಿದೆ.ತರಬೇತಿ ನಡೆಯುವ ವೇದಿಕೆಗೆ ಬಟ್ಟೆಯನ್ನು ಅಡ್ಡಲಾಗಿ ಕಟ್ಟಿ, ಈ ಸ್ಥಳಕ್ಕೆ ಕಾವಲು ಇರಿಸಲಾಗಿದೆ. ದಂಡಪ್ರಯೋಗ ಮತ್ತು ಕೈಕಾಲುಗಳನ್ನು ಬಳಸಿ ದಾಳಿ ನಡೆಸುವುದನ್ನು ಸ್ವಯಂಸೇವಕರಿಗೆ ಇಲ್ಲಿ ಕಲಿಸಿಕೊಡಲಾಗುತ್ತಿದೆ ಎಂದು ಕೈರಳಿ ವರದಿ ಹೇಳಿದೆ.
ಒಂದು ಶಿಬಿರದಲ್ಲಿ ಸುಮಾರು ನೂರು ಮಂದಿಯಿದ್ದಾರೆಂದು ವರದಿಯಾಗಿದೆ. ರಾಜ್ಯದಲ್ಲಿ ಒಟ್ಟುಇಂತಹ 30 ಶಿಬಿರಗಳಿವೆ ಎಂದು ವರದಿ ತಿಳಿಸಿದೆ.